ಶೇಣಿಯಲ್ಲಿ ಉತ್ಸವ ಛಾಯೆ: ಕುಂಬ ಳೆ ಉಪಜಿಲ್ಲಾ ಕಲೋತ್ಸವ ಉದ್ಘಾಟನೆ
ಪೆರ್ಲ: ಕಲೆಗೆ ಜಾತಿ ಧರ್ಮಗಳ ಭೇದವನ್ನು ತೊಡೆದು ಹಾಕುವ ಶಕ್ತಿ ಇದೆ ಎಂದು, ಶೇಣಿಯ ಜನತೆ ಕಲೋತ್ಸವವನ್ನು ನಾಡಿನ ಉತ್ಸವವಾಗಿ ಆಚರಿಸುತ್ತಿರುವುದು ಮಾದರಿ ಎಂದು ಶಾಸಕ ಎಕೆಎಂ ಅಶ್ರಫ್ ನುಡಿದರು. ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗುತ್ತಿರುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಎಣ್ಮಕಜೆ ಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿದರು. ಉದುಮ ಶಾಸಕ ಸಿ.ಎಚ್. ಕುಞಂಬು, ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಅಬ್ದುಲ್ಲ ಮಾದಮೂಲೆ, ಸುಧೀರ್ ಕುಮಾರ್ ಶೆಟ್ಟಿ, ಪುತ್ತಿಗೆ ಪಂ. ಅಧ್ಯಕ್ಷ ಡಿ. ಸುಬ್ಬಣ ಆಳ್ವ, ಧರ್ಮಗುರು ಫಾ. ನೆಲ್ಸನ್ ಡಿ. ಅಲ್ಮೇಡಾ, ಫಾ. ಜೋಸ್ ಚೆಂಬಟ್ಟಿಕ್ಕಲ್, ಮಲ್ಲಿಕಾ ಪಕಳ ಮಾತನಾಡಿದರು.
ಎಣ್ಮಕಜೆ ಪಂ. ಉಪಾಧ್ಯಕ್ಷೆ ರಮ್ಲ, ಜಿ.ಪಂ. ಸದಸ್ಯ ನಾರಾಯಣ ನಾಯ್ಕ್, ಬಟ್ಟು ಶೆಟ್ಟಿ, ಕೆ.ಪಿ. ಅನಿಲ್ ಕುಮಾರ್, ಬಿ.ಎಸ್. ಗಾಂಭೀರ್, ಜಯಶ್ರೀ ಕುಲಾಲ್, ಸೌದಾಬಿ ಹನೀಫ್, ಅಬ್ದುಲ್ ಮಜೀದ್, ಮುಖ್ಯೋ ಪಾಧ್ಯಾಯ ರಾಧಾಕೃಷ್ಣ ನಾಯಕ್, ಕುಸುಮಾವತಿ, ರಾಮಚಂದ್ರ ಎಂ., ಅಸೀಫ್ ಅಲಿ, ಶಾರದಾ ವೈ., ಶ್ರೀಶ ಕುಮಾರ್ ಎಂ.ಪಿ, ರವೀಂದ್ರನಾಥ ನಾಯಕ್, ವಿಲ್ಸನ್ ಡಿಸೋಜಾ, ಅಬೂಬಕರ್ ಪೆರ್ದನೆ, ಯೂಸುಫ್ ಶೇಣಿ ಉಪಸ್ಥಿತರಿದ್ದರು. ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಸ್ವಾಗತಿಸಿ, ಶಾಸ್ತಾ ಕುಮಾರ್ ಎಂ. ವಂದಿಸಿದರು. ಅಶ್ರಫ್ ಮರ್ತ್ಯ ನಿರೂಪಿಸಿದರು.