ಶೇಷವನ: ವಾರ್ಷಿಕ ಷಷ್ಠಿ ಜಾತ್ರೆ ಇಂದು, ನಾಳೆ
ಕೂಡ್ಲು: ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಜಾತ್ರಾ ಮಹೋತ್ಸವ ಇಂದು, ನಾಳೆ ವಿವಿಧ ವೈದಿಕ, ಧಾರ್ಮಿಕ, ಸಾಂ ಸ್ಕೃತಿಕ ಕಾರ್ಯಕ್ರ ಮಗಳೊಂದಿಗೆ ನಡೆಯಲಿದೆ.
ಇಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ವಿಷ್ಣುವಿನಾಯಕ ಭಜಕ ವೃಂದ ಕಾವುಗೋಳಿ ಇವರಿಂದ ಭಜನೆ, ಶ್ರೀ ನಾಗ ಸನ್ನಿಧಿಯಲ್ಲಿ ವಿಶೇಷ ತಂಬಿಲ ಸೇವೆ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಸಂಜೆ 7ರಿಂದ ಅಮೃತ ಕಲಾಕ್ಷೇತ್ರ ಕೂಡ್ಲು ಇವರಿಂದ ನೃತ್ಯ ವೈವಿಧ್ಯ ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ಸಂಗಮ ಕಾರ್ಯಕ್ರಮ ನಡೆಯಲಿದೆ.
ಚಂಪಾ ಷಷ್ಠಿ ಉತ್ಸವದಂಗವಾಗಿ ನಾಳೆ ಮಾತೃಶ್ರೀ ಭಕ್ತಿಗಾನ ಸುಧಾ ರಸಮಂಜರಿ, ಕೂಡ್ಲು ಇವರಿಂದ ಭಕ್ತಿಸುಧಾ, ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ಮಜೇಶ್ವರ ಇವರಿಂದ ಯಕ್ಷಗಾನ ತಾಳಮದ್ದಳೆ, ಕೀರ್ತನ ಕುಟೀರ ಕುಂಬಳೆ ಇವರಿಂದ ಹರಿಕಥಾ ಸತ್ಸಂಗ ನಡೆಯಲಿದೆ. ಮಧ್ಯಾಹ್ನ ಸಾಮೂಹಿಕ ಬಲಿವಾಡುಕೂಟ, ಮಹಾಪೂಜೆ, ಅನ್ನಸ್ಸಂತರ್ಪಣೆ ನಡೆಯಲಿದೆ. ಸಂಜೆ ತಾಯಂಬಕ, ಶ್ರೀ ದೇವರ ಭೂತಬಲಿ, ದರ್ಶನಬಲಿ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ ನಡೆಯಲಿದೆ.