ಶ್ರೀಗಳ ಕಾರಿಗೆ ಹಾನಿ: ಶ್ರೀ ಸದಾಶಿವ ಕೀರ್ತೇಶ್ವರ ದೇವಳ ಆಡಳಿತ ಮಂಡಳಿ ಖಂಡನೆ
ಮಂಜೇಶ್ವರ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಕಾರಿಗೆ ಹಾನಿಗೊಳಿಸಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶ್ರೀ ಸದಾಶಿವ ಕೀರ್ತೇಶ್ವರ ದೇವಳದ ಆಡಳಿತ ಮಂಡಳಿ ಸಭೆ ಆಗ್ರಹಿಸಿದೆ. ಘಟನೆಯನ್ನು ಸಭೆಯಲ್ಲಿ ಖಂಡಿಸಲಾಗಿದೆ. ಕ್ಷೇತ್ರದ ಪ್ರಭಾರಿ ಹರಿಶ್ಚಂದ್ರ ಮಂಜೇಶ್ವರ ನಿರ್ಣಯ ಮಂಡಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮೊಕ್ತೇಸರ ವಿಶ್ವನಾಥ ಪೊಯ್ಯೆಕಂಡ, ಮೊಕ್ತೇಸರರಾದ ಲಕ್ಷ್ಮಣ್ ಐಲ್, ಈಶ್ವರ ಕೋಳ್ಯೂರು, ಶೈಲೇಶ್, ಆನಂದ ಸಸಿಹಿತ್ಲು, ಕಾರ್ಯದರ್ಶಿ ಪ್ರದೀಶ್ ಅಂಜರೆ, ವಿಜಯ್ ಆಚೆಪಾಲ್ ಮಾತನಾಡಿದರು. ಈ ಸಂಬಂಧ ಎಡನೀರು ಶ್ರೀಗಳ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು.