ಶ್ರೀವಯನಾಟು ಕುಲವನ್ ದೈವಮಹೋತ್ಸವ: ಎರಿಯಾಲ್ ಕೋಟದಲ್ಲಿ ಕುಟುಂಬ ಸಂಗಮ
ಕುಂಬಳೆ: ಚೌಕಿ ಎರಿಯಾಲ್ ಕೋಟೆ ಶ್ರೀ ಭಗವತಿ ಸೇವಾ ಸಂಘ ಕ್ಷೇತ್ರದ ಅಧೀನದಲ್ಲಿರುವ ಚೌಕಿ ಕೆ.ಕೆ. ವೀಡ್ ತರ ವಾಡ್‌ನಲ್ಲಿ ೨೦೨೫ರಲ್ಲಿ ನಡೆಯಲಿರುವ ಶ್ರೀ ವಯನಾಟು ಕುಲವನ್ ದೈವ ಮಹೋತ್ಸವದ ಅಂಗವಾಗಿ ಕುಟುಂಬ ಸಂಗಮ ನಡೆಯಿತು. ರಾಘವನ್ ಬೆಳ್ಚಪ್ಪಾಡ, ರವಿ ಬೆಳ್ಚಪ್ಪಾಡ, ಕೆ.ಕೆ. ವೀಡ್ ತರವಾಡು ಆಡಳಿತ ಸಮಿತಿ ಸದಸ್ಯರ ಕುಟುಂಬ, ಕ್ಷೇತ್ರ ಸ್ಥಾನಿಕರು, ಬಂಧು-ಮಿತ್ರರು ಮೊದಲಾದವರು ಭಾಗವಹಿಸಿದರು. ದಾಮೋದರ ಆರಿಕ್ಕಾಡಿ, ಆನಂದ ಚೆಮ್ನಾಡ್, ಕರುಣಾಕರ ಬಟ್ರಂಪಾಡಿ, ಅಶೋಕ ಕೂಡ್ಲು, ನಿರ್ಮಲ, ಲೀಲಾಮಣಿ, ವಿಜಯಲಕ್ಷ್ಮಿ, ಜನಾರ್ದನ ಮೀಪುಗುರಿ, ಅಶೋಕನ್ ಬಾರಿಕ್ಕಾಡ್, ಸುಧಾಕರನ್ ಪೆರುವಾಡ್ ನೇತೃತ್ವ ನೀಡಿದರು.