ಶ್ರೀ ಧೂಮಾವತೀ ದೈವಸ್ಥಾನ ವಾರ್ಷಿಕ ನೇಮ, ನೂತನ ಮಹಾದ್ವಾರ ಲೋಕಾರ್ಪಣೆ
ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮೀಪದ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮ, ನೂತನ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮ ಡಿ. 22ರಿಂದ 24ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
22ರಂದು ಅಪರಾಹ್ನ 3.20ಕ್ಕೆ ನೂತನ ಮಹಾದ್ವಾರವನ್ನು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಲೋಕಾರ್ಪಣೆಗೈದು ಆಶೀರ್ವಚನ ನೀಡುವರು. ಶ್ರೀ ಧೂಮಾವತೀ ಮತ್ತು ಪರಿವಾರ ದೈವಗಳ ದೈವಸ್ಥಾನ ಸಮಿತಿ ಅಧಕ್ಷ ರಾಮಕೃಷ್ಣ ಭಟ್ ಸರ್ಪಂಗಳ ಅಧ್ಯಕ್ಷತೆ ವಹಿಸುವರು. ಎಣ್ಮಕಜೆ ಪಂ ಅಧ್ಯಕ್ಷ ಜೆ.ಎಸ್ ಸೋಮಶೇಖರ್, ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್, ಮುನ್ನಾಡ್ ವಡಕ್ಕೇಕರ ಶ್ರೀ ಭಗವತೀ ದೇವಸ್ಥಾನ ಸಮಿತಿ ಅಧ್ಯಕ್ಷ ಕುಞÂಕೃಷ್ಣನ್ ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಆರೆಸ್ಸೆಸ್ ಮುಖಂಡ ಸುಬ್ರಹ್ಮಣ್ಯ ಭಟ್ ಕಜಂಪಾಡಿ ಧಾರ್ಮಿಕ ಉಪನ್ಯಾಸ ನೀಡುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ಕ್ಕೆ ಯಕ್ಷಗಾನ ನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ ನಿರ್ದೇಶನದಲ್ಲಿ ವಾಂತಿಚ್ಚಾಲ್ ಕುಂಟಾಲುಮೂಲೆ ಚಿರಂಜೀವಿ ಮಹಿಳಾ ಯಕ್ಷಕುಣಿತ ಭಜನಾ ಸಂಘದಿAದ ಯಕ್ಷ ಕುಣಿತ ಭಜನೆ ನಡೆಯಲಿದೆ. ಸಂಜೆ 7ಕ್ಕೆ ಶ್ರೀಧೂಮಾವತೀ ದೈವದ ಭಂಡಾರ ತೆಗೆಯುವುದು, ಭಜನೆ, ರಾತ್ರಿ 8.30ಕ್ಕೆ ಪರಿವಾರ ದೈವ ಕೋಲ ನಡೆಯುವುದು. 23ರಂದು ಬೆಳಗ್ಗೆ 11ರಿಂದ ಭಜನೆ, 12.30ಕ್ಕೆ ಶ್ರೀ ಧೂಮಾವತೀ ದೈವದ ಕೋಲ, ಸಂಜೆ 4ಕ್ಕೆ ಬಜಕೂಡ್ಲು ಬಯಲಿನ ಪುರಿನಾಗಬನದಲ್ಲಿ ನಾಗತಂಬಿಲ, 24ರಂದು ರಾತ್ರಿ 8ಕ್ಕೆ ಶ್ರೀ ಗುಳಿಗ ಭಂಡಾರದ ಕೊಟ್ಯದಲ್ಲಿ ಗುಳಿಗ ಕೋಲ ನಡೆಯುವುದು.