ಶ್ರೀ ನಾರಾಯಣ ಗುರು ವನಿತಾ ಸರ್ವೀಸ್ ಕೋ-ಆಪರೇಟಿವ್ ಸೊಸೈಟಿ ನೂತನ ಕಚೇರಿ ಉದ್ಘಾಟನೆ 4ರಂದು
ಕಾಸರಗೋಡು: ಶ್ರೀ ನಾರಾಯಣ ಗುರು ವನಿತಾ ಸರ್ವೀಸ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಇದರ ನೂತನ ಕಚೇರಿಯನ್ನು ಬ್ಯಾಂಕ್ ರಸ್ತೆಯ ಅರಮನ ಆರ್ಕೆಡ್‌ನಲ್ಲಿ ಎಪ್ರಿಲ್ ೪ರಂದು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮ ದಲ್ಲಿ ಸೊಸೈಟಿ ಅಧ್ಯಕ್ಷೆ ಸರೋಜಿನಿ ಕೆ. ಅಧ್ಯಕ್ಷತೆ ವಹಿಸುವರು. ಕೇರಳ ಬ್ಯಾಂಕ್ ಕಾಸರಗೋಡು ಇದರ ಡಿಜಿಎಂ ಸಿ.ವಿ. ರೆಹನಾ ದೀಪ ಪ್ರಜ್ವಲನೆಗೊಳಿಸುವರು. ನಗರಸಭಾ ಕೌನ್ಸಿಲರ್ ಪವಿತ್ರ ಉಪಸ್ಥಿತರಿರುವರು. ಸರ್ಕಲ್ ಕೋ-ಆಪರೇಟಿವ್ ಯೂನಿಯನ್ ಚೆಯರ್‌ಮ್ಯಾನ್ ಕೆ.ಆರ್. ಜಯಾನಂದ ನೂತನ ಕೌಂಟರ್, ಅಸಿಸ್ಟೆಂಟ್ ರಿಜಿಸ್ಟ್ರಾರ್ ರವೀಂದ್ರ ಎ. ಠೇವಣಿ ಸ್ವೀಕಾರ ಉದ್ಘಾಟಿಸುವರು. ಕಾಸರ ಗೋಡು ಯೂನಿಟ್ ಇನ್ಸ್‌ಪೆಕ್ಟರ್ ಅನೀಶ್ ಕುಮಾರ್ ಬಿ, ಡಾ. ಇಸ್ಮಾ ಯಿಲ್ ಪವಾಸ್, ಪಿ.ಕೆ. ವಿನೋದ್ ಕುಮಾರ್, ಗೀತಾ ಸಿ, ಲೀಲಾವತಿ ನಾಯರ್, ತಾರಾ ಜೆ. ಪ್ರಭು, ಯಮುನ, ಸಂಪತ್‌ಸಾಯಿ, ಮೋಹನ್ ಮಾಯಿಪ್ಪಾಡಿ, ಶೀನ ಪೂಜಾರಿ, ವೀರಪ್ಪ ಅಂಬಾರ್, ಮೊಹಮ್ಮದ್ ಮನ್ಸೂರ್ ಎ.ಪಿ, ಹರೀಶ್ ಮನ್ನಿಪ್ಪಾಡಿ, ಲವ ಮೀಪುಗುರಿ, ರಮೇಶ್ ಪೂಜಾರಿ, ಭಾಸ್ಕರ ಕೆ, ಸ್ವಪ್ನ ಬಿ. ಭಾಗವಹಿಸುವರು.