ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಕೋಟಿ ಪಂಚಾಕ್ಷರಿ ಜಪ ಯಜ್ಞ ಲೆಕ್ಕಪತ್ರ ಮಂಡನೆ
ಕಾಸರಗೋಡು: ಶ್ರೀ ಮಲ್ಲಿ ಕಾರ್ಜುನ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಕೋಟಿ ಪಂಚಾಕ್ಷರಿ ಜಪಯಜ್ಞ , ಶ್ರೀಚಕ್ರ ಪೂಜೆ, ರುದ್ರ ಹೋಮ ಲೆಕ್ಕ ಪತ್ರ ಮಂಡನೆ ಶ್ರೀ ಕ್ಷೇತ್ರದಲ್ಲಿ ಜರಗಿತು. ಕ್ಷೇತ್ರ ಟ್ರಸ್ಟ್ ಬೋರ್ಡ್ ಚೆಯರ್‌ಮೆನ್ ಗಂಗಾ ಧರನ್ ನಾಯರ್ ಅಧ್ಯಕ್ಷತೆ ವಹಿ ಸಿದರು. ಯಜ್ಞ ಸಮಿತಿ ಅಧ್ಯಕ್ಷ ಡಾ| ಅನಂತ ಕಾಮತ್, ಕಾರ್ಯಧ್ಯಕ್ಷ ಕೆ.ಎನ್. ವೆಂ ಕಟ್ರಮಣ ಹೊಳ್ಳ, ಉಪಾ ಧ್ಯಕ್ಷೆ ಮೀರಾ ಕಾಮತ್ ಮಾತನಾಡಿ ದರು. ಟ್ರಸ್ಟ್ ಬೋರ್ಡ್ ಸದಸ್ಯ ಉಮೇಶ್ ಯಜ್ಞ ಸಮಿತಿ ಪದಾಧಿಕಾರಿ ಗಳು ಹಾಗೂ ಸದಸ್ಯರಾದ ದಯಾ ನಂದ ಪೂಜಾರಿ, ಕಮಲೇಶ್ ಕೇಳು ಗುಡ್ಡೆ, ಶ್ರೀಲತಾ ಟೀಚರ್, ಪುರಂ ದರ ಶೆಟ್ಟಿ, ಪ್ರೇಮಾ, ಸವಿತಾ, ವಸಂತ್ ಕೆರೆಮನೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್ ಲೆಕ್ಕಪತ್ರ ವಾಚನಗೈದರು ಪ್ರಚಾರ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ವಂದಿಸಿದರು.