ಷರತ್ತುಗಳನ್ನು ಪಾಲಿಸದೆ ಕಾರ್ಯಾಚರಿಸುತ್ತಿದ್ದ ಮಸಾಜ್ ಸೆಂಟರ್‌ಗೆ ಬೀಗ
ಕಾಸರಗೋಡು: ಷರತ್ತುಗಳನ್ನು ಪಾಲಿಸದೆ ಕಾರ್ಯಾಚರಿಸುತ್ತಿದ್ದ ಮಸಾಜ್ ಕೇಂದ್ರವನ್ನು ಪೊಲೀಸರು ಮುಚ್ಚುಗಡೆಗೊಳಿಸಿದರು. ಕಾಸರಗೋಡು ಹಳೆ ಬಸ್ ನಿಲ್ದಾಣದ ಸಮೀಪದ ಬಹುಮಹಡಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಕೇಂದ್ರವನ್ನು ನಗರ ಠಾಣೆ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ನೇತೃತ್ವದಲ್ಲಿ ಮುಚ್ಚುಗಡೆಗೊಳಿಸಲಾಗಿದೆ. ಮಸಾಜ್ ಸೆಂಟರ್ ಕಾರ್ಯಾಚರಿಸುವುದಕ್ಕೆ ಸಂಸ್ಥೆಗೆ ಪರವಾನಗಿ ಇದ್ದರೂ ಇತರ ನಿಬಂಧನೆಗಳನ್ನು ಪಾಲಿಸಲಾ ಗುತ್ತಿರಲಿಲ್ಲವೆಂದು ಸೂಚಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕಾನೂನು ಪ್ರಕಾರ ಮಸಾಜ್ ಕೇಂದ್ರ ಕಾರ್ಯಾ ಚರಿಸಬೇಕಿದ್ದರೆ ಲೈಸನ್ಸ್ ಹೊರತಾಗಿ ಮೆಡಿಕಲ್ ಪ್ರಮಾಣಪತ್ರ, ಮೆಡಿಕಲ್ ಕಾರ್ಡ್, ಡರ್ಮಟೋಲಜಿ ಎಂಬೀ ವಿಷಯಗಳಲ್ಲಿ ಜಿಲ್ಲಾ ವೈದ್ಯಾ ಧಿಕಾರಿಯ ಒಪ್ಪಿಗೆ ಬೇಕಾಗಿದೆ. ಇದ್ಯಾವುದೂ ಇಲ್ಲದೆ ಕೇಂದ್ರ ಕಾರ್ಯಾಚರಿಸುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.