ಸಂಘಟಿತ ಶಕ್ತಿಯಿಂದಲೇ ಧರ್ಮ ಜಾಗೃತಿ- ಹಾರಿಕಾ ಮಂಜುನಾಥ್
ಕಾಸರಗೋಡು : ಹಿಂದೂ ಸಮಾಜವು ಸಂಘಟಿತವಾಗಿದ್ದರೆ ಮಾತ್ರವೇ ಧರ್ಮವು ಜಾಗೃತಿಯಾಗ ಬಲ್ಲದು ಎಂದು ಪ್ರಸಿದ್ಧ ವಾಗ್ಮಿ ಹಾರಿಕಾ ಮಂಜುನಾಥ್ ನುಡಿದರು.
ಕಾಸರಗೋಡು ದೇವರಗುಡ್ಡೆ ಶ್ರೀ ಶೈಲ ಮಹಾದೇವ ದೇವಸ್ಥಾನದಲ್ಲಿ ಧನುಪೂಜಾ ಮಹೋತ್ಸವದ ದಶಮಾನೋತ್ಸವ ಸಂಭ್ರಮ, ಧನುಪೂಜಾ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.
ನಾವೆಲ್ಲರೂ ನಮ್ಮ ಧರ್ಮದ ಕುರಿತಾದ ಅರಿವನ್ನು ಇನಷ್ಟು ಜಾಗೃತಗೊಳಿಸಿ ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಇನ್ನಷ್ಟು ಹೆಚ್ಚಿನ ಒಲವನ್ನು ನೀಡಿ ಆಚಾರ ಅನುಷ್ಠಾನ ಗಳಿಗೆ ಹೆಚ್ಚಿನ ಮಹತ್ವವನ್ನು ನೀಡ ಬೇಕೆಂದೂ, ಮಕ್ಕಳಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಮನೆಯ ತಾಯಂದಿರು ದೇವಾಲ ಯದ ಮಹತ್ವ ಹಾಗೂ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಬೇಕಾದ ಅಗತ್ಯವಿದೆ ಎಂದರು.
ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು. ಧಾರ್ಮಿಕ ಮುಂದಾಳು ಡಾ| ಅನಂತ ಕಾಮತ್ ಅಧ್ಯಕ್ಷತೆ ವಹಿಸಿದರು. ಧನುಪೂಜಾ ಸಮಿತಿಯ ಗೌರವಾಧ್ಯಕ್ಷ ಡಾ. ಜಯಪ್ರಕಾಶ್ ನಾಯ್ಕ್ , ಧನುಪೂಜಾ ಸಮಿತಿಯ ಅಧ್ಯಕ್ಷÀ ನ್ಯಾಯವಾದಿ ಸದಾನಂದ ರೈ, ಶ್ರೀಶೈಲ ಮಹದೇವ ಸೇವಾ ಟ್ರಸ್ಟ್ ಅಧ್ಯಕ್ಷ ಸುಭಾಷ್ ಪಾಟಾಳಿ, ಧನುಪೂಜಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ದಿನೇಶ್. ಎಂ.ಟಿ ಮಾತನಾಡಿದರು. ಶ್ರೀ ಮಹಾದೇವ ಸೇವಾ ಟ್ರಸ್ಟ್ ಪ್ರಧಾನಕಾರ್ಯದರ್ಶಿ ನಿಶಾಂತ್ ಗಂಗೆ ಸ್ವಾಗತಿಸಿ, ಸೇವಾಟ್ರಸ್ಟ್ ಎಕ್ಸಿಕ್ಯೂಟಿವ್ ಸದಸ್ಯ ಗಣೇಶ್ ಗಟ್ಟಿ ಮನ್ನಿಪ್ಪಾಡಿ ವಂದಿಸಿದರು. ಬಳಿಕ ಮಹಾಪೂಜೆ ಜರಗಿತು.