ಸಂಚರಿಸುತ್ತಿದ್ದ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳಕ್ಕೆ ಯತ್ನ: ಆರೋಪಿ ಬಂಧನ

ಬದಿಯಡ್ಕ: ಸಂಚರಿಸುತ್ತಿದ್ದ ಬಸ್ ನೊಳಗೆ ವಿದ್ಯಾರ್ಥಿನಿಗೆ ಕಿರುಕುಳ ನೀಡ ತ್ನಿಸಿದ ಯುವಕನನ್ನು  ಪ್ರಯಾಣಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿ ದ್ದಾರೆ. ಉಪ್ಪಿನಂಗಡಿ ನಿವಾಸಿ ಅಬ್ದುಲ್ ಕರೀಂ (40) ಎಂಬಾತನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕುಂಬಳೆಯಿಂ ದ ಬದಿಯಡ್ಕಕ್ಕೆ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿದ್ದ ವಿದ್ಯಾರ್ಥಿನಿಗೆ ಆರೋಪಿ ಅಬ್ದುಲ್ ಕರೀಂ ಕಿರುಕುಳ ನೀಡಲೆತ್ನಿಸಿದ್ದಾನೆನ್ನಲಾಗಿದೆ. ಈ ವೇಳೆ ವಿದ್ಯಾರ್ಥಿನಿಗೆ ಬೊಬ್ಬಿಟ್ಟಿದ್ದು, ವಿಷಯ ತಿಳಿದ  ಪ್ರಯಾಣಿಕರು ಆರೋಪಿಯನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನೇತಾರ ಅವಿನಾಶ್ ಒತ್ತಾಯಿಸಿದ್ದಾರೆ. ಬಸ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಉಪಟಳ ನೀಡುವ ತಂಡ ಇತ್ತೀಚೆಗಿನಿಂದ ತೀವ್ರಗೊಂಡಿದೆ. ಇಂತಹ ಸಮಾಜ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸರಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page