ಸಂತಡ್ಕ ಶ್ರೀ ಅರಸು ಸಂಕಲ ದೈವಕ್ಷೇತ್ರ ಪುನರ್ ಪ್ರತಿಷ್ಠಾ, ವಾರ್ಷಿಕ ಮಹೋತ್ಸವ ಆರಂಭ: ಕೋಮು ಸೌಹಾರ್ದತೆಯಲ್ಲಿ ನಡೆದ ಹೊರೆ ಕಾಣಿಕೆ ಮೆರವಣಿಗೆ
ಮೀಯಪದವು: ಸಂತಡ್ಕ ಶ್ರೀ ಅರಸು ಸಂಕಲ ದೈವಕ್ಷೇತ್ರ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆ ಇಂದಿನಿಂದ ಈ ತಿಂಗಳ 24ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರಂಗವಾಗಿ ನಿನ್ನೆ ಸಂಜೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಜರಗಿತು. ಈ ವೇಳೆ ಸಂತಡ್ಕ ದಾರುಲ್ ಇಸ್ಲಾಂ ಜುಮಾ ಮಸೀದಿ, ಹನಫಿ ಜುಮಾ ಮಸೀದಿ ಸಂತಡ್ಕ ಇವರ ವತಿಯಿಂದ ಪಾನೀಯ ಹಾಗೂ ಸಿಹಿ ತಿಂಡಿ ವಿತರಿಸಿ ಕೋಮು ಸೌಹಾರ್ದತೆ ಮೆರೆದರು. ಮಸೀದಿಗಳ ಅಧ್ಯಕ್ಷರಾದ ಮುಹಮ್ಮದ್ ಹಾಜಿ ಕಂಚಿಲ, ಶೇಖ್ ಖಾಸೀಮ್ ಸಾಹೇಬ್ ಮೆರವಣಿಗೆಗೆ ಸ್ವಾಗತ ನೀಡಿ ಪಾನೀಯ ವಿತರಣೆಗೆ ನೇತೃತ್ವ ನೀಡಿದರು.
ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮ ಆರಂಭಗೊಂಡಿದ್ದು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಸಂಜೆ 6ರಿಂದ ವಿವಿಧ ವೈದಿಕ ಕಾರ್ಯಕ್ರಮ, ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.