ಸಜಂಕಿಲ ಎಸ್ಸಿ ಕಾಲನಿಗಿರುವ ರಸ್ತೆ ಶೋಚನೀಯ: ಅಭಿವೃದ್ಧಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು
ಪುತ್ತಿಗೆ: ಪರಿಶಿಷ್ಟ ಕಾಲನಿಗೆ ಸಂಪರ್ಕಿಸುವ ರಸ್ತೆಯೊಂದು ಹಲವು ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲಿದ್ದರೂ ದುರಸ್ತಿಗೆ ಕ್ರಮ ಉಂಟಾಗಿಲ್ಲ. ಇದರಿಂದ ಈ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಸೃಷ್ಟಿಯಾಗಿದೆ. ಪುತ್ತಿಗೆ ಪಂಚಾಯ ತ್ನ ೧೧ನೇ ವಾರ್ಡ್ನಲ್ಲಿರುವ ವಿಕಾಸ್ನಗರ ದಿಂದ ಸಜಂಕಿಲ ಎಸ್ಸಿ ಕಾಲನಿಗೆ ತೆರಳುವ ರಸ್ತೆಯಲ್ಲಿ ೫೦೦ ಮೀಟರ್ನಷ್ಟು ತೀರಾ ಕಳಪೆಯಾಗಿದೆ. ರಸ್ತೆಯ ಡಾಮರು ಎದ್ದುಹೋಗಿ ಅಲ್ಲಲ್ಲಿ ಹೊಂಡಗಳು ತುಂಬಿಹೋಗಿದ್ದು, ನಡೆದಾಡಲೂ ಕೂಡಾ ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಮಳೆ ಸುರಿಯುವ ಸಂದರ್ಭಗಳಲ್ಲಿ ಹೊಂಡಗಳಲ್ಲಿ ತುಂಬಿಕೊಂಡಿರುವ ನೀರು ವಾಹನಗಳು ಸಂಚರಿಸುವ ವೇಳೆ ಪಾದಚಾರಿಗಳ ಮೈಗೆ ಎರಚಲ್ಪ ಡುತ್ತಿವೆ. ತುರ್ತು ಸಂದರ್ಭದಲ್ಲಿ ವಾಹನಗಳ ಅಗತ್ಯ ಬಂದಲ್ಲಿ ಸಂಚರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಹನಗಳು ಕೂಡಾ ಸಕಾಲದಲ್ಲಿ ತಲುಪುತ್ತಿಲ್ಲ. ಈ ರಸ್ತೆಯ ದುರವಸ್ಥೆಯ ಕುರಿತು ಹಲವು ಬಾರಿ ಗ್ರಾಮ ಸಭೆಗಳಲ್ಲಿ ವಿಷಯ ಮಂಡಿಸಿದರೂ ಜನಪ್ರತಿನಿಧಿಗಳೋ, ಅಧಿಕಾರಿಗಳೋ ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ನಾಗರಿಕರು ದೂರುತ್ತಿದ್ದಾರೆ. ಸಜಂಕಿಲ ಎಸ್ಸಿ ಕಾಲನಿಯಲ್ಲಿ ೨೬ ಕುಟುಂಬಗಳು ವಾಸಿಸುತ್ತಿವೆ. ಅಲ್ಲದೆ ಇತರ ಸುಮಾ ರು ೬೦ರಷ್ಟು ಕುಟುಂಬಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿ ಬರುತ್ತಿ ದೆ. ಆದ್ದರಿಂದ ಈ ರಸ್ತೆಗೆ ಡಾಮರೀ ಕರಣ ನಡೆಸಿ ಸಂಚಾರ ಯೋಗ್ಯಗೊಳಿ ಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.