ಸಜಂಕಿಲ ಶಾಲೆಯಲ್ಲಿ ವಾಚನ ದಿನಾಚರಣೆ
ಬಾಯಾರು: ಸಜಂಕಿಲ ಶ್ರೀ ದುರ್ಗಾಪರಮೇಶ್ವರೀ ಎ ಯು ಪಿ ಶಾಲೆಯಲ್ಲಿ ಪಿ.ಎನ್ ಪಣಿಕ್ಕರ್ ಅವರ ಸ್ಮರಣಾರ್ಥ ವಾಚನಾ ದಿನಾಚರಣೆ ನಡೆಯಿತು. ಇದರಂಗವಾಗಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾ ರ್ಥಿಗಳು ಇದರ ಸದುಪಯೋಗವನ್ನು ಪಡೆದರು. ವಿಶೇಷ ಅಸೆಂಬ್ಲಿಯಲ್ಲಿ ಮುಖ್ಯೋಪಾಧ್ಯಾಯರು ಪುಸ್ತಕ ಓದುವಿಕೆಯ ಮಹತ್ವವನ್ನು ವಿವರಿಸಿದರು. ಮಕ್ಕಳಿಗಾಗಿ ಪಿಎನ್ ಪಣಿಕ್ಕರ್ ಕುರಿತಾದ ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.