ಸನ್ನಿಧಾನದಲ್ಲಿ ತೀರ್ಥಾಟಕರಿಗೆ ಪೊಲೀಸ್ ಹಲ್ಲೆ-ದೂರು
ಶಬರಿಮಲೆ: ಸನ್ನಿಧಾನದಲ್ಲಿ ತೀರ್ಥಾಟಕನಿಗೆ ಪೊಲೀಸರು ಹಲ್ಲೆಗೈಯ್ದುದಾಗಿ ಆರೋಪವುಂಟಾಗಿದೆ. ತಮಿಳುನಾಡು ತಂಜಾವೂರು ನಿವಾಸಿ ದಯಾನಂದ್ (೨೪) ಎಂಬವರು ಈ ಬಗ್ಗೆ ಆರೋಪಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಇವರು ಸನ್ನಿಧಾನದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಿನ್ನೆ ಬೆಳಿಗ್ಗೆ ಹದಿನೆಂಟು ಮೆಟ್ಟಿಲೇರುತ್ತಿದ್ದಾಗ ಪೊಲೀಸ್ ಹಲ್ಲೆಗೈದುದಾಗಿ ದೂರಲಾಗಿದೆ. ಹಲ್ಲೆಗೈದುದನ್ನು ಪ್ರಶ್ನಿಸಿದ ಇತರ ತೀರ್ಥಾಟಕರಿಗೂ ಪೊಲೀಸ್ ಹಲ್ಲೆಗೈದುದಾಗಿ ದೂರಲಾಗಿದೆ.