ಸಪ್ಲೈಕೋ: ೧೩ ಅವಶ್ಯಕ ಸಾಮಗ್ರಿಗಳ ಬೆಲೆಯಲ್ಲಿ ೮೯ ರೂ. ತನಕ ಹೆಚ್ಚಳ
ಕಾಸರಗೋಡು: ಸಪ್ಲೈಕೋ ಮಾರುಕಟ್ಟೆಗಳಲ್ಲಿ ವಿತರಿಸಲಾಗುವ ೧೩ ಅವಶ್ಯಕ ಸಾಮಗ್ರಿಗಳ ಸಬ್ಸಿಡಿ ಯನ್ನು ಶೇ. ೭೦ರಿಂದ ೩೫ಕ್ಕೆ ಇಳಿಸಿದ ಬೆನ್ನಲ್ಲೇ ಅವುಗಳ ದರದಲ್ಲಿ ೩ರಿಂದ ಆರಂಭಗೊಂಡು ೮೯ ರೂ. ತನಕ ಏರಿಕೆ ಉಂಟಾಗಿದೆ. ಇದರಂತೆ ಜಯ ಅಕ್ಕಿ (ಕಿಲೋವೊಂದಕ್ಕೆ) ಈ ಹಿಂದಿನ ೨೫ ರೂ.ನಿಂದ ೨೯.೪೬ ಕ್ಕೇರಿದೆ. ಕುರುವ ಅಕ್ಕಿ ದರ ೨೫ ರೂ.ನಿಂದ ೩೦.೦೫ ರೂ., ಮಟ್ಟಾ ಅಕ್ಕಿ ಬೆಲೆ ೨೪ ರೂ. ನಿಂದ ೩೦.೮೬ ರೂ. ಆಗಿ ಹೆಚ್ಚಿಸ ಲಾಗಿದೆ. ಬೆಳ್ತಿಗೆ ಅಕ್ಕಿ ದರ ೨೩ ರೂ. ನಿಂದ ೨೬.೦೮ರೂ.ಗೇರಿದೆ. ಇನ್ನು ಸಕ್ಕರೆ ದರ ೨೨ ರೂ.ನಿಂದ ೨೭.೮೮ ರೂ, ಪಚ್ಚೆಹೆಸ್ರು ೭೪ ರೂ.ನಿಂದ ೯೨.೬೩ ರೂ, ಉದ್ದು ೬೬ ರೂ.ನಿಂದ ೯೫.೨೮ ರೂ., ದೊಡ್ಡ ಕಡಲೆ ೪೩ ರೂ.ನಿಂದ ೬೯.೯೩ ರೂ., ಬಗಡೆ ೪೫ ರೂ.ನಿಂದ ೭೫.೭೮ ರೂ., ತೊಗರಿ ಬೇಳೆ ೬೫ ರೂ.ನಿಂದ ೧೧೧.೪೮ ರೂ., ಮೆಣಸು (೫೦೦ ಗ್ರಾಂ) ೩೭.೫೦ ರೂ.ನಿಂದ ೮೨.೦೭ ರೂ., ಕೊತ್ತಂಬರಿ (೫೦೦ ಗ್ರಾಂ)೩೯.೧೦ ರೂ.ನಿಂದ ೩೯.೫೦ ರೂ. ಮತ್ತು ತೆಂಗಿನೆಣ್ಣೆ (ಅರ್ಧ ಲೀಟರ್) ದರ ೪೬ ರೂ.ನಿಂದ ೫೫.೨೮ರೂ. ಗೇರಿಸಲಾಗಿದೆ. ೧೩ ಸಾಮಗ್ರಿಗಳಿಗೆ ಈ ಹಿಂದೆ ೬೮೦ ರೂ.ನೀಡಬೇಕಾ ಗಿದ್ದ ಜಾಗದಲ್ಲಿ ಇನ್ನು ೯೪೦ ರೂ. ನೀಡಬೇಕಾಗಿ ಬರಲಿದೆ.
ಈ ಸಾಮಗ್ರಿಗಳನ್ನು ತೆರೆದ ಮಾರುಕಟ್ಟೆಯಿಂದ ಖರೀದಿಸುವ ಹಾಗಿದ್ದಲ್ಲಿ ಅದಕ್ಕೆ ೧೪೪೬ ರೂ. ನೀಡಬೇಕಾಗಿ ಬರಲಿದೆಯೆಂದು ರಾಜ್ಯ ಆಹಾರ-ನಾಗರಿಕ ಸರಬರಾ ಜು ಸಚಿವ ಜಿ.ಆರ್. ಅನಿಲ್ ಹೇಳಿದ್ದಾರೆ. ಈ ಸಾಮಗ್ರಿಗಳನ್ನು ಸಪ್ಲೈಕೋ ಮೂಲಕ ಖರೀದಿಸಿದಲ್ಲಿ ೫೦೬ ರೂ. ಲಾಭವಾಗಲಿದೆಯೆಂದು ಅವರು ಹೇಳಿದ್ದಾರೆ.