ಸಮುದ್ರದಲ್ಲಿ ರಾತ್ರಿವೇಳೆ ಅಕ್ರಮ ಮೀನುಗಾರಿಕೆ: ಕರ್ನಾಟಕದ ಎರಡು ಬೋಟ್‌ಗಳು ವಶ
ಕಾಸರಗೋಡು: ಕಾಸರಗೋಡು ಕರಾವಳಿ ಪ್ರದೇಶದ ಸಮುದ್ರದಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಮೀನು ಗಾರಿಕೆ ನಡೆಸುತ್ತಿದ್ದ ಕರ್ನಾಟಕದ ಎರಡು ಮೀನುಗಾರಿಕಾ ಬೋಟ್ ಗಳನ್ನು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಶಿರಿಯಾ, ಕಾಸರಗೋಡು ಮತ್ತು ತೃಕರಿಪುರ ಕರಾವಳಿ ಪೊಲೀಸರು ಸೇರಿ ನಡೆಸಿದ ಸಂಯುಕ್ತ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅಲೀಸ ಮತ್ತು ಸಾಗರ್ ಸಂಪತ್ತು ಎಂಬ ಹೆಸರಿನ ಬೋಟ್‌ಗಳನ್ನು ಈ ರೀತಿ ವಶಪಡಿ ಸಲಾಗಿದೆ. ನಂತರ ಅವುಗಳಿಗೆ ೪.೫ ಲಕ್ಷ ರೂ. ಜುಲ್ಮಾನೆ ವಸೂಲಿ ಮಾಡಲಾಗಿದೆ. ಕಾಸರಗೋಡು ಕರಾವಳಿಯಿಂದ 12 ನೋಟಿಕಲ್ ಮೈಲ್‌ನಲ್ಲಿ ಸಮುದ್ರದಲ್ಲಿ ಈ ಬೋಟ್‌ಗಳಲ್ಲಿ ರಾತ್ರಿ ಅನಧಿಕೃತವಾಗಿ ಮೀನುಗಾ ರಿಕೆ ನಡೆಸಲಾಗುತ್ತಿತ್ತು. ಇವುಗಳ ವಿರುದ್ಧ ಕೇರಳ ಸಮುದ್ರ ಮೀನು ಗಾರಿಕಾ ನಿಯಂತ್ರಣ (ಕೆಎಂಎಫ್ ಆರ್‌ಆರ್) ಕಾನೂನು ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ.