ಸಮುದ್ರ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಕಾಸರಗೋಡು: ತಳಂಗರೆ ಹಾರ್ಬರ್ ಬಳಿ ಇಂದು ಬೆಳಿಗ್ಗೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿ ಪುರುಷನಾಗಿದ್ದು, ಸುಮಾರು 25ರಿಂದ 40ರ ಮಧ್ಯೆ ಪ್ರಾಯ ಅಂದಾಜಿಸ ಲಾಗಿದೆ. ಮೃತ ವ್ಯಕ್ತಿ ಪ್ಯಾಂಟ್ ಮತ್ತು ಫುಲ್‌ಕೈ ಶರ್ಟ್ ಧರಿಸಿದ್ದು, ಜೇಬಿನಲ್ಲಿ ಮೊಬೈಲ್ ನಂಬ್ರ ಪತ್ತೆಯಾಗಿದೆ. ವಿಷಯ ತಿಳಿದ ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ನಂತರ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೃತ ವ್ಯಕ್ತಿಯ ಜೇಬಿನಲ್ಲಿ ಅಮರ್ ದೇವ್ (35) ಗಗಾಸರ ಕುಶುಂಹ ಘೋರಕ್ ಪುರ್ ಉತ್ತರಪ್ರದೇಶ್ ಎಂಬ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಅಧರಿಂದಾಗಿ ಮೃತ ವ್ಯಕ್ತಿ ಈತನೇ ಆಗಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.