ಸರಕಾರದ ನಾಲ್ಕನೇ ಭೂ-ಹಕ್ಕು ವಿತರಣಾ ಮೇಳ ಫೆ.೨೨ರಂದು

ಕಾಸರಗೋಡು: ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ಎರಡನೇ ಅವಧಿಗೆ ಅಧಿಕಾರಕ್ಕೇರಿದ ಬಳಿಕದ ನಾಲ್ಕನೇ ಭೂ ಹಕ್ಕು ವಿತರಣಾ ಮೇಳದ ರಾಜ್ಯಮಟ್ಟದ ಉದ್ಘಾಟನೆ ಫೆ.೨೨ರಂದು ತೃಶೂರಿನಲ್ಲಿ ನಡೆಯಲಿದೆ.

ಮುಖ್ಯಮಂತ್ರಿ  ಪಿಣರಾಯಿ ವಿಜಯನ್ ಇದರ ಉದ್ಘಾಟನೆ ನೆರವೇರಿಸುವರು. ಇದರಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಾಗಿ ಒಟ್ಟು ೩೦,೦೦೦ ಮಂದಿಗೆ ಭೂ-ಹಕ್ಕು ಪತ್ರ ವಿತರಿಸಲಾಗುವುದು. ಆ ಮೂಲಕ ಕಳೆದ ಎರಡೂವರೆ ವರ್ಷದಲ್ಲಿ ಹೀಗೆ ಭೂ ಹಕ್ಕು ಪತ್ರಗಳು ಲಭಿಸುವವರ ಸಂಖ್ಯೆ ಇನ್ನು ೧.೫ ಲಕ್ಷಕ್ಕೇರಲಿದೆ.

ತೃಶೂರಿನಲ್ಲಿ  ನಡೆಯುವ ಈ ರಾಜ್ಯ ಮಟ್ಟದ ಭೂ ಹಕ್ಕು ವಿತರಣಾ ಕಾರ್ಯಕ್ರಮದಲ್ಲಿ ಇತರ ಜಿಲ್ಲೆಯವರಿಗೂ ಭೂ-ಹಕ್ಕು ಪತ್ರಗಳನ್ನು ವಿತರಿಸಲಾಗುವುದು. 

ಅತೀ ಹೆಚ್ಚು ಎಂಬಂತೆ  ಪಾಲ್ಘಾಟ್ ಜಿಲ್ಲೆಯ ೬೧೦೦ ನಂತರದ ಸ್ಥಾನದಲ್ಲಿ ಮಲಪ್ಪುರ ಜಿಲ್ಲೆಗೆ ೫೦೦೦ ಮಂದಿಗೆ ಭೂ-ಹಕ್ಕು ಪತ್ರಗಳು ಲಭಿಸಲಿದೆ. ಅತೀ ಕಡಿಮೆ ಎಂಬಂತೆ ವಯನಾಡು ಜಿಲ್ಲೆಯಲ್ಲಿ ೧೦೦ರಷ್ಟು ಮಂದಿಗೆ ಮಾತ್ರವೇ ಇದು ಲಭಿಸಲಿದೆ.

ಈಗಿನ ಎಡರಂಗ ಸರಕಾರದ ಐದು ವರ್ಷಗಳ ಆಡಳಿತಾವಧಿ ಪೂರ್ಣಗೊಳ್ಳುವ ಮೊದಲು ರಾಜ್ಯದಲ್ಲಿ ನಾಲ್ಕು ಲಕ್ಷದಷ್ಟು ಮಂದಿಗೆ ಭೂ ಹಕ್ಕು ಪತ್ರ ವಿತರಿಸುವ ಗುರಿಯನ್ನು ಸರಕಾರ ಹಾಕಿಕೊಂಡಿದೆ. ಈ ತನಕ ನಡೆದ ಮೂರು ಹಂತಗಳ ಮೇಳಗಳಲ್ಲಾಗಿ ಒಟ್ಟು ೧,೨೨,೦೦೦ ಮಂದಿಗೆ ಭೂ ಹಕ್ಕು ಪತ್ರ ವಿತರಿಸಲಾಗಿದೆ. ಒಂದನೇ ಪಿಣರಾಯಿ ವಿಜಯನ್ ನೇತೃತ್ವದ  ಸರಕಾರ ಈ ಹಿಂದೆ ತನ್ನ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ೧,೭೭,೦೦೦ ಮಂದಿಗೆ ಭೂ ಹಕ್ಕು ಪತ್ರ ವಿತರಿಸಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page