ಸರಕಾರಿ ಸವಲತ್ತು, ಕಾನೂನು ಬಗ್ಗೆ ಅರಿವು ಕಾರ್ಯಾಗಾರ
ಕಾಸರಗೋಡು: ಕೇರಳ ರಾಜ್ಯ ಮೊಗೇರ ಸರ್ವೀಸ್ ಸೊಸೈಟಿ ಹಾಗೂ ಆಲ್ ಇಂಡಿಯಾ ಕಾನ್ಫೆಡರೇಶನ್ ಆಫ್ ಎಸ್.ಸಿ/ಎಸ್.ಟಿ ಆರ್ಗನೈಸೇಷನ್ ಕಾಸರಗೋಡು ಜಿಲ್ಲಾ ಕಮಿಟಿಗಳ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ವಿದ್ಯಾನಗರ ಕಮ್ಯೂನಿಟಿ ಸ್ಕಿಲ್ ಪಾರ್ಕ್ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗಾಗಿ, ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗವಕಾಶಗಳ ಬಗ್ಗೆ ಸರಕಾರದ ವತಿಯಿಂದ ಸಿಗುವ ಸವಲತ್ತು, ಕಾನೂನು ಹಾಗೂ ಮೋಟಿವೇಶನ್ ತರಗತಿ ಆಯೋಜಿಸಲಾಯಿತು. ಸರಕಾರಿ ಸವಲತ್ತುಗಳ ಬಗ್ಗೆ ಎಸ್‌ಸಿ ಕೋರ್ಡಿನೇಟರ್ ಸುಮಶ್ರೀ ಕಾನೂನು ಬಗ್ಗೆ ಎಸ್‌ಸಿ ಲೀಗಲ್ ಕೌನ್ಸಿಲರ್ ನ್ಯಾಯವಾದಿ ಪೂರ್ಣಿಮ, ಉನ್ನತ ವಿದ್ಯಾಭ್ಯಾಸ ಉದ್ಯೋಗ ಅವಕಾಶಗಳ ಬಗ್ಗೆ ಕೆ. ಶ್ರೀಕಾಂತ್ ಮಾಸ್ಟರ್ ತರಗತಿ ನೀಡಿದರು. ಎ.ಪಿ. ಬೇಡು ಕಲ್ಲಕಟ್ಟ ಅಧ್ಯಕ್ಷತೆ ವಹಿಸಿದರು. ಐ. ಲಕ್ಷ್ಮಣ ಪೆರಿಯಡ್ಕ ಉದ್ಘಾಟಿಸಿದರು. ರಾಘವನ್ ಉದುಮ, ಕೃಷ್ಣನ್ ಕೆ.ಕೆ, ಗಣೇಶ್ ಸಿ.ಕೆ. ಮಾತನಾಡಿದರು. ಬಾಲಕೃಷ್ಣ ಗೋಳಿಕಟ್ಟೆ ಶುಭಾಶಂಸನೆಗೈದರು. ಪೊನ್ನಪ್ಪನ್ ಅಮ್ಮಂಗೋಡ್ ಸ್ವಾಗತಿಸಿ, ಶಶಿಧರ ಎದಿರ್‌ತೋಡು ನಿರೂಪಿಸಿದರು.