ಸರಕು ಸಾಗಾಟದ ಎರಡು ಲಾರಿಗಳು ಮುಖಾಮುಖಿ: ನಾಲ್ವರಿಗೆ ಗಾಯ
ಮಂಜೇಶ್ವರ: ಸರಕು ಸಾಗಾಟದ ಎರಡು ಲಾರಿಗಳು ಡಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ಹೊಸಂಗಡಿ ಬಳಿಯಲ್ಲಿ ನಡೆದಿದೆ.
ಮಂಗಳೂರು ಭಾಗದಿಂದ ಕಾಸರಗೋಡು ಕಡೆಗೆ ಸಂಚರಿಸುತಿದ್ದ ತಮಿಳುನಾಡು ನೋಂದಾವಣೆಯ ಲಾರಿ ಹಾಗೂ ಕಾಸರಗೋಡು ಭಾಗದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕರ್ನಾಟಕ ನೋಂದಾವಣೆಯ ಲಾರಿ ಪೊಸೋಟು ನೂತನ ಸೇತುವೆ ಬಳಿಯ ಹೆದ್ದಾರಿಯಲ್ಲಿ ನಿನ್ನೆ ಮುಂಜಾನೆ 4ಗಂಟೆ ವೆÃಳÉ ಡಿಕ್ಕಿಯಾಗಿವÉ. ಅಪಘಾತದ ಬಗ್ಗೆ ಮಾಹಿತಿ ತಿಳಿದು ಸ್ಥಳೀಯರು, ಮಂಜೇಶ್ವರ ಪೊಲೀಸರು ಹಾಗೂ ಉಪ್ಪಳ ಅಗ್ನಿಶಾಮಕ ದಳ ಅಧಿಕಾರಿ ಗೋಪಾಲಕೃಷ್ಣನ್ ನೇತೄತ್ವದಲ್ಲಿ ಸ್ಥಳಕ್ಕೆ ತಲುಪಿ ನಜ್ಜು ಗÀÄಜ್ಜಾದ ಎರಡು ಲಾರಿಗಳಲ್ಲಿ ಸಿಲುಕಿದ ಇಬ್ಬರು ಚಾಲಕರನ್ನು ಹೊರಕ್ಕೆ ತೆಗೆದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಲಾರಿಯ ಚಾಲಕರು ಗಂಭೀರ ಗಾಯಗೊಂಡಿದ್ದಾರೆ. ಇಬ್ಬರು ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿ ರುವುದಾಗಿ ತಿಳಿದು ಬಂದಿದೆ.