ಸರ್ವೀಸ್ ರಸ್ತೆಯಲ್ಲಿ ಕಾಲ್ನಡೆ ಪ್ರಯಾಣಿಕರಿಗೆ ಸಂಚಾರ ಸೌಕರ್ಯ ಏರ್ಪಡಿಸಲು ಆಗ್ರಹ
ಮೊಗ್ರಾಲ್ಪುತ್ತೂರು: ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳಿಗೆ ಸಮೀಪವಿರುವ ಶಾಲೆಗಳು ಕಾರ್ಯಾರಂಭಗೊಳ್ಳುವ ಮುಂಚಿತವಾಗಿ ಕಾಲ್ನಡೆ ಪ್ರಯಾಣಿಕರಿಗೆ, ವಿದ್ಯಾರ್ಥಿಗಳ ಸಂಚಾರವನ್ನು ಸುರಕ್ಷಿತಗೊ ಳಿಸುವುದಕ್ಕಾಗಿ ಬೇಲಿ ಸಹಿತದ ಸಂರಕ್ಷಣಾ ಭಿತ್ತಿಗಳನ್ನು ನಿರ್ಮಿಸಬೇಕೆಂದು ಮೊಗ್ರಾಲ್ ದೇಶೀಯವೇದಿ ಆಗ್ರಹಿಸಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಕಾಲುದಾರಿಗಳನ್ನು ಲೋಪದೋಷವಿಲ್ಲದೆ ನಿರ್ಮಿ ಸಬೇಕೆಂದು ಸುಪ್ರಿಂ ಕೋರ್ಟ್ ಕೂಡಾ ಸ್ಪಷ್ಟಪಡಿಸಿದೆ. ಆದರೆ ನಿರ್ಮಾಣ ಕಂಪೆನಿ ಅಧಿಕಾರಿಗಳು ಈ ವಿಷಯದಲ್ಲಿ ಸಾಕಷ್ಟು ಗಮನ ನೀಡುತ್ತಿಲ್ಲವೆಂಬ ಆರೋಪವಿದೆ. ಪ್ರಸ್ತುತ ಸರ್ವೀಸ್ ರಸ್ತೆಗಳಿಗೆ ಸಮೀಪದ ಚರಂಡಿ ಕಳೆದು ಉಳಿದಿರುವ ಸ್ಥಳಗಳಲ್ಲಿ ಜಿಲ್ಲೆಯ ಹಲವು ಭಾಗಗಳಲ್ಲಿ ನಿರ್ಮಾಣ ಕ್ಕಾಗಿರುವ ಕಲ್ಲು, ಮಣ್ಣು, ತ್ಯಾಜ್ಯ, ವಿದ್ಯುತ್ ಕಂಬಗಳು ಇದ್ದು, ಇದು ವಿದ್ಯಾರ್ಥಿಗಳಿಗೆ, ಕಾಲ್ನಡೆ ಪ್ರಯಾ ಣಿಕರಿಗೆ ಸಮಸ್ಯೆಗೆ ಕಾರಣವಾಗುತ್ತಿದೆ. ತ್ಯಾಜ್ಯವನ್ನು ತೆರವುಗೊಳಿಸಲು ವಿದ್ಯುತ್ ಕಂಬಗಳನ್ನು ಬದಿಗೆ ಸ್ಥಾಪಿಸಲು ಕ್ರಮವುಂಟಾಗಬೇಕು. ಟ್ಯಾಂಕರ್ ಸಹಿತದ ದೊಡ್ಡ ಲಾರಿಗಳೆಲ್ಲಾ ಈಗ ಸರ್ವೀಸ್ ರಸ್ತೆಯಲ್ಲೇ ಸಂಚರಿಸುತ್ತಿದ್ದು, ಇದು ಕೂಡಾ ಕಾಲ್ನಡೆ ಸಂಚಾರಿಗಳಿಗೂ, ವಿದ್ಯಾರ್ಥಿ ಗಳಿಗೂ ಬೆದರಿಕೆ ಸೃಷ್ಟಿಸುತ್ತಿದೆ. ಈ ವಿಷಯದ ಬಗ್ಗೆ ಕಳೆದ ವರ್ಷ ಕೇಂದ್ರ ಸಾರಿಗೆ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶ ನೀಡಿತ್ತು. ಕಾಲುದಾರಿಯನ್ನು ತುರ್ತಾಗಿ ನಿರ್ಮಿಸಬೇಕೆಂದು, ಇಲ್ಲದಿದ್ದರೆ ಕುಂಬಳೆ ಯುಎಲ್ಸಿಸಿ ಕಚೇರಿಗೆ ಮಾರ್ಚ್ ಸಹಿತದ ಮುಷ್ಕರ ಆಯೋಜಿಸುವುದಾಗಿ ಮೊಗ್ರಾಲ್ ದೇಶೀಯವೇದಿ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.