ಸರ್ವೀಸ್ ರಸ್ತೆಯಲ್ಲಿ ಬಾಕಿಯಾದ ಸರಕು ಲಾರಿ: ಉಪ್ಪಳ ಪರಿಸರದಲ್ಲಿ ಗಂಟೆಗಳ ಕಾಲ ಸಂಚಾರ ಮೊಟಕು
ಉಪ್ಪಳ: ಟೈಲ್ಸ್ ಹೇರಿದ ಲಾರಿ ಯೊಂದರ ಚಕ್ರ ಹೂತು ಹೋಗಿ ಸುಮಾರು ಒಂದೂವರೆ ಗಂಟೆಗಳ ಕಾಲ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಮೊಟಕುಗೊಂಡು ಸಾರ್ವ ಜನಿಕರಿಗೆ ಸಂಕಷ್ಟ ನೀಡಿದ ಘಟನೆ ಉಪ್ಪಳ ಪರಿಸರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಹಿದಾಯತ್ ನಗರದಲ್ಲಿ ಸರ್ವೀಸ್ ರಸ್ತೆ ಬದಿಯಲ್ಲಿರುವ ಓರ್ವರ ಮನೆಗೆ ಟೈಲ್ಸ್ ತಂದ ಲಾರಿ ಮನೆಯ ಗೇಟ್ ನೊಳಗೆ ಪ್ರವೇಶಿಸು ವಾಗ ರಸ್ತೆ ಚರಡಿ ಬಳಿ ಹಿಂಬದಿಯ ಟಯರ್ ಹೂತು ಹೋಗಿ ಸರ್ವೀಸ್ ರಸ್ತೆಯಲ್ಲಿ ಅಡ್ಡವಾಗಿ ನಿಂತು ಬಿಟ್ಟಿದೆ. ಇದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗದೆ ಹಿದಾಯತ್ ನಗರದಿಂದ ಬಂದ್ಯೋಡು ತನಕ ವಾಹನಗಳ ಸರದಿ ಸಾಲು ಉಂಟಾಗಿದ್ದು, ತಲಪಾಡಿ ಭಾಗಕ್ಕೆ ಸಾಗುವ ಬಸ್ ಸಹಿತ ವಾಹನಗಳ ಸಂಚಾರ ಮೊಟಕು ಗೊಂಡಿದೆ. ವಿವಿಧ ಕಡೆಗಳಿಗೆ ತಲು ಪುವ ಜನರು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಉಂಟಾಗಿದೆ. ಬಳಿಕ ಪೊಲೀ ಸರು ಹಾಗೂ ಊರವರ ಸಹಾಯ ದಿಂದ ಕ್ರೆöÊನ್ ಮೂಲಕ ಲಾರಿಯನ್ನು ತೆರವುಗೊಳಿಸಲಾಗಿದೆ. ಉಪ್ಪಳದಲ್ಲಿ ಅರ್ಧಗಂಟೆಗಳ ಕಾಲ ದಿನನಿತ್ಯ ರಸ್ತೆ ತಡೆ ಉಂಟಾಗುತ್ತಿದೆ. ಉಪ್ಪಳ ಪೇಟೆಯಲ್ಲಿ ನಡೆಯುತ್ತಿರುವ ಪ್ಲೆöÊ ಓವರ್ ನಿರ್ಮಾಣ ಪೂರ್ತಿಗೊಂಡರೆ ಮಾತ್ರಇಲ್ಲಿ ಉಂಟಾಗುವ ವಾಹನÀ ರಸ್ತೆ ತಡೆಯಿಂದ ಮುಕ್ತಿ ಹೊಂದ ಬಹುದೆಂದು, ಅಲ್ಲದೆ ರಸ್ತೆ ಬದಿಯಲ್ಲಿ ವಾಹನಗಳನ್ನು ಇರಿಸಿ ರಸ್ತೆ ತಡೆ ಉಂಟುಮಾಡುವವರ ವಿರುದ್ದ ಕಾನೂನು ಪಾಲಕರು ಕ್ರಮಕ್ಕೆ ಮುಂದಾಗಬೇಕೆAದು ಸಾರ್ವಜನಿಕರು ಒತ್ತಾಯಿಸಿದ್ದಾರೆ.