ಸಲಿಂಗರತಿ ಕಿರುಕುಳ: ಟ್ಯೂಶನ್ ಸೆಂಟರ್ ಮಾಲಕ ಸೆರೆ
ಕಾಸರಗೋಡು: ಟ್ಯೂಶನ್‌ಗೆ ಬಂದ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಟ್ಯೂಶನ್ ಸಂಸ್ಥೆಯ ಮಾಲಕನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ನಗರದ ಟ್ಯೂಶನ್ ಸೆಂಟರ್‌ವೊಂದರ ಮಾಲಕ ಅದಿಯಾಂ ಬೂರು ಕಾಲಿಕಡವಿನ ಬಾಬುರಾಜ್ (೪೮) ಬಂಧಿತ ಆರೋಪಿ. ಟ್ಯೂಶನ್ ಸೆಂಟರ್‌ಗೆ ಟ್ಯೂಶನ್ ಗಾಗಿ ಬಂದ ಪ್ರಾಯಪೂರ್ತಿ ಯಾಗದ ಬಾಲಕನಿಗೆ ಕಳೆದ ಜನವರಿ ೨೪ರಂದು ಸಲಿಂಗರತಿ ಕಿರುಕುಳ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಮಧ್ಯೆ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಅದನ್ನು ನ್ಯಾಯಾಲಯ ತಳ್ಳಿಹಾಕಿದೆ. ಅದರಿಂದಾಗಿ ಆರೋಪಿ ಬಳಿಕ ಪೊಲೀಸ್ ಠಾಣೆಯಲ್ಲಿ ಶರಣಾಗಿ ದ್ದನು. ಅದರಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನಂತರ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.