ಸವಾಕ್ ರಜತ ವಾರ್ಷಿಕ ಆಚರಣೆ: ಪ್ರಶಸ್ತಿ ಪ್ರದಾನ

ಕಾಸರಗೋಡು: ಸವಾಕ್ ಜಿಲ್ಲಾ ಸಮಿತಿಯ ಬೆಳ್ಳಿ ಹಬ್ಬ ವಾರ್ಷಿಕೋ ತ್ಸವವನ್ನು ಕೇರಳ ಜಾನಪದ ಅಕಾಡೆಮಿ ಕಾರ್ಯದರ್ಶಿ ಎ.ವಿ. ಅಜಯ್ ಕುಮಾರ್ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಉಮೇಶ್ ಎಂ ಸಾಲಿಯಾನ್ ಅಧ್ಯಕ್ಷತೆ ವಹಿಸಿದರು. ಸವಾಕ್ ರಾಜ್ಯ ಅಧ್ಯಕ್ಷ ಜಿ.ಕೆ. ಪಿಳ್ಳ ಪ್ರಧಾನ   ಭಾಷಣ ಮಾಡಿದರು. ಇದೇ ವೇಳೆ ಸುದರ್ಶನ್‌ರಿಗೆ ಕಲಾ ಶ್ರೇಷ್ಠ ಪುರಸ್ಕಾರ, ವಿನೋದ್‌ರಿಗೆ ನಾಟ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿರಿಯ ನಾಟಕಗಾರ ಟಿ.ವಿ ಗಂಗಾಧರನ್, ನಾಟಕ ನಟಿ  ಮಂಜೇಶ್ವರ ಪಂ. ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ವೇಣು ಕಾಸರಗೋಡು, ಸನ್ನಿ ಅಗಸ್ಟಿನ್, ಈ ವರ್ಷದ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಮೇಶ್ ಶೆಟ್ಟಿ ಬಾಯಾರು ಎಂಬವರನ್ನು ಗೌರವಿಸಲಾಯಿತು. ಬಳಿಕ ೨೫ರಷ್ಟು ಕಲಾವಿದರಿಗೆ ಬೆಳ್ಳಿಹಬ್ಬ ಪ್ರಶಸ್ತಿ ನೀಡಲಾಯಿತು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ರಾತ್ರಿ ೧೦ರ ಬಳಿಕ ಮೈಕ್ ಉಪಯೋಗಿಸಬಾರದೆಂಬ ನ್ಯಾಯಾಲಯ ಆದೇಶವನ್ನು  ಮರುಪರಿಶೀಲಿಸಲು ಸರಕಾರ ಮಧ್ಯ ಪ್ರವೇಶಿಸಬೇಕೆಂದು ಠರಾವು ಮೂಲಕ ಸಮ್ಮೇಳನದಲ್ಲಿ ಆಗ್ರಹಿಸಲಾಯಿತು. ಪಿ.ಪಿ. ವಿಜಯನ್, ಪಿ.ಟಿ. ಸುಬೈರ್, ಎಂ.ಎಂ. ಗಂಗಾಧರನ್, ಚಂದ್ರಹಾಸ ಕಯ್ಯಾರ್ ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page