ಸಹಕಾರಿ ಠೇವಣಿಗೆ ೦.೭೫ ಶೇ.ವರೆಗೆ ಬಡ್ಡಿ ಹೆಚ್ಚಳ
ತಿರುವನಂತಪುರ: ಪ್ರಾಥಮಿಕ ಸಹಕಾರಿ ಸಂಘಗಳ ಹಾಗೂ ಕೇರಳ ಬ್ಯಾಂಕ್ನ ಠೇವಣಿಗಳ ಬಡ್ಡಿದರವನ್ನು ೦.೫ ಶೇ.ದಿಂದ ೦.೭೫ ಶೇಕಡಾವರೆಗೆ ಹೆಚ್ಚಿಸಲಾಗಿದೆ ಎಂದು ಸಚಿವ ವಿ.ಎನ್. ವಾಸವನ್ ತಿಳಿಸಿದ್ದಾರೆ. ಬಡ್ಡಿ ನಿರ್ಣಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಹಕಾರಿ ಠೇವಣಿ ಸಂಗ್ರಹದ ಮೂಲಕ ೯,೦೦೦ ಕೋಟಿ ರೂ.ವನ್ನು ಗುರಿ ಇರಿಸಲಾಗಿದೆ. ಒಂದು ಮನೆಯಿಂದ ಒಂದು ಹೊಸ ಖಾತೆ ಎಂಬ ಪ್ರಚಾರದೊಂದಿಗೆ ಆರಂಭಿಸುವ ಕಾರ್ಯಕ್ರಮ ಈ ತಿಂಗಳ ೧೦ರಿಂದ ಆರಂಭಗೊಳ್ಳುವುದು. ಪ್ರಾಥಮಿಕ ಸಹಕಾರಿ ಬ್ಯಾಂಕ್ಗಳ ಮೂಲಕ ೭೨೫೦ ಕೋಟಿ ರೂ. ಕೇರಳ ಬ್ಯಾಂಕ್ ಮೂಲಕ ೧,೭೫೦ ಕೋಟಿ ರೂ. ರಾಜ್ಯ ಸಹಕಾರಿ ಕೃಷಿ ಅಭಿವೃದ್ಧಿ ಬ್ಯಾಂಕ್ಗಳ ಮೂಲಕ ೧೫೦ ಕೋಟಿ ರೂ. ಸಂಗ್ರಹಿಸಲು ಗುರಿ ಇರಿಸಲಾಗಿದೆ.