ಸಹಕಾರ ಭಾರತಿಯಿಂದ ಸಹಕಾರಿ ಸಪ್ತಾಹ
ಕಾಸರಗೋಡು: ಸಹಕಾರ ಭಾರತಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ೭೦ನೆಯ ಅಖಿಲ ಭಾರತ ಸಹಕಾರಿ ವಾರಾಚರಣೆ ಕಾರ್ಯಕ್ರಮವು ಕಾಸರಗೋಡು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಐತಪ್ಪ ಮವಾರ್ ಅಧ್ಯಕ್ಷತೆ ವಹಿಸಿದರು. ಸಹಕಾರ ಭಾರತಿ ದಕ್ಷಿಣ – ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ ಎಸ್ ಆರ್ ಸತೀಶ್ ಚಂದ್ರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಹಕಾರಿ ಕ್ಷೇತ್ರವು ದೇಶದ ಅಭಿವೃದ್ಧಿಯಲ್ಲಿ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಅವರು ವಿವರಿಸಿದರು. ಸಹಕಾರ ಭಾರತಿ ರಾಷ್ಟ್ರೀಯ ಸಮಿತಿ ಸದಸ್ಯ ನ್ಯಾಯವಾದಿ ಕರುಣಾಕರನ್ ನಂಬಿಯಾರ್ ದಿಕ್ಸೂಚಿ ಭಾಷಣ ಮಾಡಿದರು. ಸಹಕಾರ ಭಾರತಿ ರಾಜ್ಯ ಅರ್ಬನ್ ಸೆಲ್ ಪ್ರಮುಖ್ ಹಾಗೂ ಕಾಸರಗೋಡು ಕೋ ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಎ ಸಿ ಅಶೋಕ್ ಕುಮಾರ್, ಸಹಕಾರ ಭಾರತಿ ಕಾರ್ಪೊರೇಟಿವ್ ಮಹಿಳಾ ಸೆಲ್ ರಾಜ್ಯ ಪ್ರಮುಖ್ ಶೋಭನ, ಸಹಕಾರ ಭಾರತಿ ಎಂಪ್ಲಾಯೀಸ್ ಸೆಲ್ ಜಿಲ್ಲಾ ಅಧ್ಯಕ್ಷ ರಾಧಾಕೃಷ್ಣನ್ ಶುಭಾಶಂಸನೆ ಗೈದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ, ಕ್ಯಾಂಪ್ಕೋ ನಿರ್ದೇಶಕರು, ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರು, ನೌಕರವೃಂದ, ಸಹಕಾರ ಭಾರತಿ ಜಿಲ್ಲಾ ಸಮಿತಿಯ ಸದಸ್ಯರು, ತಾಲೂಕು ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು. ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷ ಗಣೇಶ್ ಪಾರೆಕಟ್ಟ ಸ್ವಾಗತಿಸಿದರು. ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ವಿಘ್ನೇಶ್ವರ ಕೆದುಕೋಡಿ ವಂದಿಸಿದರು.