ಸಹಕಾರ ಭಾರತಿ ಕಾಸರಗೋಡು ತಾಲೂಕು ಸಮ್ಮೇಳನ 18ರಂದು
ಕಾಸರಗೋಡು: ಸಹಕಾರ ಭಾರತಿ ಕಾಸರಗೋಡು ತಾಲೂಕು ಸಮ್ಮೇಳನ ಮೇ 18ರಂದು ಅಪರಾಹ್ನ 3 ಗಂಟೆಗೆ ಕಾಸರಗೋಡು ಟೌನ್ ಬ್ಯಾಂಕ್ ಹಾಲ್ನಲ್ಲಿ ನಡೆಯಲಿದೆ. ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರ್ ಉದ್ಘಾಟಿಸುವರು. ತಾಲೂಕು ಅಧ್ಯಕ್ಷ ನಾರಾಯಣನ್ ಕಲ್ಹಾದ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಟೌನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎ.ಸಿ. ಅಶೋಕ್ ಕುಮಾರ್, ಸಹಕಾರ ಭಾರತಿ ಎಂಪ್ಲೋಯೀಸ್ ಸಂಘದ ತಾಲೂಕು ಅಧ್ಯಕ್ಷ ಉದಯ ಬೆಳ್ಳೂರು, ಸಹಕಾರ ಭಾರತಿ ತಾಲೂಕು ಕೋಶಾಧಿಕಾರಿ ಹರಿ ಮಧೂರು, ಕಾರ್ಯದರ್ಶಿ ಗಣಪತಿ ಪ್ರಸಾದ್ ಮೊದಲಾದವರು ಉಪಸ್ಥಿತರಿರುವರು.