ಸಾಮಗ್ರಿ ವಿತರಣೆ ವಾಹನಗಳಿಗೆ ದಂಡ ಹೇರುವುದನ್ನು ನಿಲ್ಲಿಸಬೇಕು- ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಶನ್
ಕಾಸರಗೋಡು: ಅತ್ಯಗತ್ಯ ಸಾಮಗ್ರಿಗಳನ್ನು ವಿತರಿಸುವ ಡಿಸ್ಟ್ರಿಬ್ಯೂಟರ್‌ಗಳಿಗೆ ಪೇಟೆಯ ಅಂಗಡಿಗಳ ಮುಂಭಾಗ ಸಾಮಗ್ರಿಗಳನ್ನು ಸಪ್ಲೈ ಮಾಡಲು ಸಾಧ್ಯವಾಗುತ್ತಿಲ್ಲವೆಂದು, ಸಪ್ಲೈ ವಾಹನಗಳಿಗೆ ಪೊಲೀಸರು ದಂಡ ಹೇರುವುದನ್ನು ಹೊರತುಪಡಿಸಬೇಕೆಂದೂ ಆಲ್ ಕೇರಳ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಶನ್ ಆಗ್ರಹಿಸಿದೆ. ಈ ಬಗ್ಗೆ ನಡೆಸಿದ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಮಾಹಿನ್ ಕೋಳಿಕ್ಕರ ಅಧ್ಯಕ್ಷತೆ ವಹಿಸಿದರು. ರಾಜ್ಯ ಅಧ್ಯಕ್ಷ ಮುಜೀಬ್ ರಹ್‌ಮಾನ್ ಉದ್ಘಾಟಿಸಿದರು. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಉಪಾಧ್ಯಕ್ಷ ಕೆ. ಅಹಮ್ಮದ್ ಶರೀಫ್, ವಿ. ಅಯ್ಯಪ್ಪನ್ ನಾಯರ್, ಬಿನು ಮಂಞಲಿ, ವತ್ಸನ್ ಮೆನೋನ್, ಎ.ಪಿ. ಶಿವದಾಸನ್, ಪಿ.ಕೆ. ರಾಜನ್, ಅಸ್ಲಂ, ಶಶಿಧರನ್ ಕೆ, ಜಲೀಲ್, ಶಂಸುದ್ದೀನ್, ಮುಹಮ್ಮದಲಿ, ಬಾಲಕೃಷ್ಣನ್ ಮಾತನಾಡಿದರು.
ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ. ರಾಜೇಶ್ ಕಾಮತ್, ಉಪಾಧ್ಯಕ್ಷರಾಗಿ ಶಶಿಧರನ್ ಜಿ.ಎಸ್., ಅಸ್ಲಂ, ಜಲೀಲ್, ಶಶಿಧರನ್ ಕೆ, ಪ್ರದಾನ ಕಾರ್ಯ ದರ್ಶಿಯಾಗಿ ಡಾ. ರಾಹುಲ್ ನಂದ ಕುಮಾರ್, ಕಾರ್ಯದರ್ಶಿಗಳಾಗಿ ನವಾಸ್, ಎಂ.ಎಸ್. ಜಂಶೀದ್, ಮುತ್ತ ಲೀಬ್, ಕೋಶಾಧಿಕಾರಿಯಾಗಿ ಮುನೀರ್, ಗೌರವಾಧ್ಯಕ್ಷರಾಗಿ ಪಿ.ಕೆ. ರಾಜನ್, ಮಾಹಿನ್, ಇತರ ಪದಾಧಿಕಾ ರಿಗಳಾಗಿ ಟಿ.ಎ. ಇಲ್ಯಾಸ್, ಮುಹಮ್ಮ ದಲಿ, ಶಂಸುದ್ದೀನ್, ಬಾಲಕೃಷ್ಣನ್, ವಿಶ್ವನಾಥನ್ ಆಯ್ಕೆಯಾದರು.