ಸಾರ್ವಜನಿಕ ಪ್ರದೇಶಗಳಲ್ಲಿ ಬೋರ್ಡ್ ಸ್ಥಾಪಿಸಲು ಮುಂಗಡ ಅನುಮತಿ ಕಡ್ಡಾಯ
ಕಾಸರಗೋಡು: ಸಾರ್ವಜನಿಕ ಪ್ರದೇಶಗಳ ಬೋರ್ಡ್, ಬ್ಯಾನರ್ ಇತ್ಯಾದಿಗಳನ್ನು ಸ್ಥಾಪಿಸಲು ಅದಕ್ಕೆ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳಿಂದ ಮುಂಗಡವಾಗಿ ಅನುಮ ತಿ ಪಡೆಯಬೇಕೆಂಬ ಕಡ್ಡಾಯ ಕಾನೂನು ಇದೆ. ಅದನ್ನು ಇನ್ನು ಎಲ್ಲ ರೂ ಕಡ್ಡಾಯವಾಗಿ ಪಾಲಿಸಬೇಕೆಂದು ರಾಜ್ಯ ಸ್ಥಳೀಯಾಡಳಿತ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರು ಹೊಸದಾಗಿ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಕ್ರಮ ಅನುಸರಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಕಾನೂನುಕ್ರಮ ಮಾತ್ರವಲ್ಲ ದಂಡವನ್ನು ವಸೂಲಿ ಮಾಡಲಾಗುವುದು. ಸಾರ್ವಜನಿಕ ಪ್ರದೇಶಗಳಲ್ಲಿ ಬೋರ್ಡ್ ಇತ್ಯಾದಿ ಗಳು ಸ್ಥಾಪಿಸುವಾಗ ಅದರ ಸೈಸ್ ಇತ್ಯಾದಿಗಳ ಮಾಹಿತಿಗಳನ್ನೂ ಮುಂಗಡ ಅನುಮತಿ ಪಡೆಯುವ ವೇಳೆ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡಬೇಕು. ಅದನ್ನು ಹೆಚ್ಚಿನವರು ಪಾಲಿಸುತ್ತಿಲ್ಲ. ಇನ್ನು ಅದನ್ನು ಕಟ್ಟುನಿಟ್ಟುಗೊಸಲಾಗುವುದೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.