ಸಿಡಿಲೆರಗಿ ಹಾನಿಯಾದ ಕಡಂಬಾರು ಶಾಲೆಗೆ ಪಂ. ಅಧ್ಯಕ್ಷೆ ಭೇಟಿ
ಹೊಸಂಗಡಿ: ಇತ್ತೀಚೆಗೆ ಸಿಡಿಲೆರಗಿದ ಕಡಂಬಾರ್ ಸರಕಾರಿ ಪ್ರೌಢ ಶಾಲೆಗೆ ಪಂಚಾಯತ್ ಅಧ್ಯಕ್ಷೆಯ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಿಡಿಲೆರಗಿದ ಹಿನ್ನೆಲೆಯಲ್ಲಿ ಶಾಲೆಯ ವಯರಿಂಗ್ ಹಾನಿಗೊಂಡಿತ್ತು. ಈ ಬಗ್ಗೆ ಮುಖ್ಯೋಪಾಧ್ಯಾಯಿನಿ ಸುನಿತಾ ಪಂಚಾಯತ್, ವಿಲ್ಲೇಜ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರಂತೆ ತಂಡ ಭೇಟಿ ನೀಡಿದ್ದು, ಮೀಂಜ ಪಂ. ಅಧ್ಯಕ್ಷೆ ಸುಂದರ ಆರ್. ಶೆಟ್ಟಿ, ವಿಲ್ಲೇಜ್ ಆಫೀಸರ್, ಕೃಷಿ ಇಲಾಖೆ ಅಧಿಕಾರಿಗಳು, ಪಿಟಿಎ ಅಧ್ಯಕ್ಷ ಮೊಯ್ದೀನ್ ಕುಂಞಿ, ಪ್ರಿಜ್ಜು ಬಳ್ಳಾರ್, ರಾಜೇಶ್ ಕೊಡ್ಲಮೊಗರು, ರಹೀಸ್, ಅಲೆನ್ ಭಾಗವಹಿಸಿದರು.