ಸಿನಿಮಾ ನಟಿ ಮೀನಾ ಗಣೇಶ್ ನಿಧನ
ಶೊರ್ನೂರು: ಸಿನಿಮಾ-ಧಾರಾವಾಹಿ ನಟಿ ಮೀನಾ ಗಣೇಶ್ (81) ನಿಧನಹೊಂದಿದರು. ಇಂದು ಮುಂಜಾನೆ ಶೊರ್ನೂರಿನ ಆಸ್ಪತ್ರೆಯಲ್ಲಿ ಅಂತ್ಯ ಸಂಭವಿಸಿದೆ. ಅಸೌಖ್ಯದ ಹಿನ್ನೆಲೆಯಲ್ಲಿ ನಾಲ್ಕು ದಿನದ ಹಿಂದೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ೨೦೦ರಷ್ಟು ಸಿನಿಮಾ ಹಾಗೂ 25ರಷ್ಟು ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ. ನಾಟಕ ರಂಗದಿಂದ ಸಿನಿಮಾಕ್ಕೆ ಪಾದಾಪಣೆಗೈದಿದ್ದರು.
ಸೂರ್ಯ ಸೋಮ, ಕೇರಳ ಥಿಯೇಟರ್ಸ್, ಚಿನ್ಮಯಿ ಮೊದಲಾದ ನಾಟಕ ತಂಡಗಳಲ್ಲಿ ವೇಷಹಾಕಿದ್ದರು. ಕಲಾಭವನ್ ಮಣಿ ನಾಯಕನಾಗಿ ಅಭಿನಯಿಸಿದ ವಾಸಂತಿಯುಂ ಲಕ್ಷ್ಮಿಯುಂ ಪಿನ್ನೆ ಞಾನುಂ, ಮೀಶ ಮಾಧವನ್, ನಂದನಂ, ಅಮ್ಮಕ್ಕಿಳಿ ಕ್ಕೂಡ್, ಸೆಲ್ಯುಲಾಯ್ಡ್ ಸಹಿತ ಹಲವಾರು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಪತಿ ನಾಟಕ ನಿರ್ದೇಶಕ ಎ.ಎನ್. ಗಣೇಶ್ ಆಗಿದ್ದಾರೆ. ನಿರ್ದೇಶಕ ಮನೋಜ್ ಗಣೇಶ್, ಸಂಗೀತ ಎಂಬಿವರು ಮಕ್ಕಳಾಗಿದ್ದು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.