ಸಿಪಿಎಂನಿಂದ ಶ್ರೀಮಂತವರ್ಗದ ಓಲೈಕೆ- ಪಿ.ಕೆ. ಫೈಸಲ್
ಬಾಯಾರು: ಶ್ರೀಮಂತ ವರ್ಗವನ್ನು ಓಲೈಸುವ ಉದ್ದೇಶದಿಂದ ಸಿಪಿಎಂ ನಾಯಕರು ಆಡಳಿತ ನಡೆಸುತ್ತಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್ ಆರೋಪಿಸಿದರು. ಹತಾಷ ಮನೋಭಾವ ಹೊಂದಿರುವ ಸಿಪಿಎಂ ನಾಯಕರಿಗೆ ಬಡವರ ಭವಣೆ ಕಾಣುತ್ತಿಲ್ಲ ಎಂದು ಅವರು ಆರೋಪಿಸಿದರು. ಬಾಯಾರಿನಲ್ಲಿ ನಡೆದ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ಏಕದಿನ ನಾಯಕತ್ವ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧಕ್ಷತೆ ವಹಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿ. ಪ್ರಭಾಕರನ್, ಸೋಮಶೇಖರ ಜೆ.ಎಸ್, ಸುಂದರ ಆರಿಕ್ಕಾಡಿ, ಸೇವಾದಳ ಅಧ್ಯಕ್ಷ ರಮೇಶನ್, ಬ್ಲೋಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ, ಸತ್ಯನ್ ಸಿ. ಉಪ್ಪಳ, ರಾಘವೇಂದ್ರ ಭಟ್, ಮೋಹನ ರೈ, ನಾರಾಯಣ ಏದಾರ್ ಮಾತನಾಡಿದರು. ಇದೇ ವೇಳೆ ಪೆರುವಾಯಿ ಪಂಚಾಯತ್ ಅಧ್ಯಕ್ಷೆ ನಫೀಸಾರನ್ನು ಸನ್ಮಾನಿಸಲಾಯಿತು. ಶಾಜಿ ಎನ್.ಸಿ. ಸ್ವಾಗತಿಸಿ, ಜೀವನ್ ಕ್ರಾಸ್ತಾ ವಂದಿಸಿದರು. ಶ್ರೀನಿವಾಸ ನಿರೂಪಿಸಿದರು.
ಕರ್ನಾಟಕ ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಾಜಿದ್ ಮವ್ವಲ್, ಶಾರೋನ್ ಭಾಗವಹಿಸಿದರು. ಸಮಾರೋಪ ಸಭೆಯನ್ನು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಡಿ. ಸುಬ್ಬಯ್ಯ ರೈ ಉದ್ಘಾಟಿಸಿದರು. ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದರು. ಎಲಿಜಬೆತ್, ಜೋಸ್ಟರ್, ನೌಶಾದ್, ಅಬ್ದುಲ್ಲ ಹಾಜಿ, ವಿನ್ಸೆಂಟ್, ಸಂಧ್ಯಾ ಭರತ್‌ರಾಜ್, ಶಿವರಾಮ ಶೆಟ್ಟಿ ಭಾಗವಹಿಸಿದರು.