ಸಿಪಿಎಂ ಪೈವಳಿಕೆ ಲೋಕಲ್ ಸಮ್ಮೇಳನ: ಸಾರ್ವಜನಿಕ ಸಭೆ
ಪೈವಳಿಕೆ: ಸಿಪಿಎಂನ 24ನೇ ಪಾರ್ಟಿ ಕಾಂಗ್ರೆಸ್‌ನಂಗವಾಗಿ ಪೈವಳಿಕೆ ಲೋಕಲ್ ಸಮ್ಮೇಳನದ ಸಾರ್ವಜನಿಕ ಸಭೆ ಪೈವಳಿಕೆ ಕೊಡಿಯೇರಿ ಬಾಲಕೃಷ್ಣನ್ ನಗರದಲ್ಲಿ ನಡೆಯಿತು. ಚಂದ್ರ ನಾಯ್ಕ್ ಮಾನಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಏರಿಯ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು ಮಾತನಾಡಿದರು. ಹಿರಿಯ ನೇತಾರರಾದ ಶ್ರೀನಿವಾಸ ಭಂಡಾರಿ, ಕೆ. ನಾರಾಯಣ ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ಜಯಂತಿ, ಕೆಎಲ್‌ಸಿ ಸದಸ್ಯರಾದ ಹುಸೈನ್ ಮಾಸ್ತರ್ ಉಪಸ್ಥಿತರಿದ್ದರು. ಅಬ್ದುಲ್ಲ ಕೆ ಸ್ವಾಗತಿಸಿ, ಸದಾನಂದ ಕೋರಿಕ್ಕಾರ್ ವಂದಿಸಿದರು. ಏರಿಯ ಸದಸ್ಯ ಹಾರಿಸ್ ಪೈವಳಿಕೆ, ಎಲ್‌ಸಿ ಸದಸ್ಯರು, ಬ್ರಾಂಚ್ ಕಾರ್ಯದರ್ಶಿಗಳು, ಸದಸ್ಯ ರು ಮೊದಲಾದವರು ಉಪಸ್ಥಿತ ರಿದ್ದರು.