ಸಿಪಿಎಂ ಬೀಡುಬೈಲು ಬ್ರಾಂಚ್ ಹಿರಿಯ ಸದಸ್ಯ ಅಬ್ಬಾಸ್ ಹಾಜಿ ನಿಧನ
ಪೈವಳಿಕೆ: ಸಿಪಿಎಂ ಬೀಡುಬೈಲು ಬ್ರಾಂಚ್‌ನ ಹಿರಿಯ ಸದಸ್ಯ ಅಬ್ಬಾಸ್ ಹಾಜಿ ದೇವಕಾನ (73) ನಿಧನ ಹೊಂದಿದರು. ಸಿಪಿಎಂ ಪಕ್ಷಕ್ಕೆ ಬೇಕಾಗಿ ಚಿಕ್ಕಂದಿನಿಂದಲೇ ದುಡಿದಿದ್ದರು. ದೇವಕಾನ ಮಸೀದಿ ಅಧ್ಯಕ್ಷರಾಗಿಯೂ, ಉತ್ತಮ ಕೃಷಿಕರೂ ಆಗಿದ್ದರು. ಮೃತರು ಪತ್ನಿ ಅವ್ವಂಞಿ, ಮಕ್ಕಳಾದ ಅಬ್ದುಲ್ ಕಬೀರ್, ಕರೀಂ, ಮಿಯಾಸಫ್ ರಜಾಕ್, ತಾಹಿರ, ಅಳಿಯ ಉಮ್ಮರ್ ಬೇಕೂರು, ಸೊಸೆಯಂದಿರಾದ ಖೈರುನ್ನೀಸ, ರುಖಿಯ, ಫಸಿಲ, ಸುಮಯ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತರ ಮನೆಗೆ ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ, ಏರಿಯಾ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಹಾರಿಸ್ ಪೈವಳಿಕೆ, ಚಂದ್ರ ನಾಯ್ಕ್ ಮಾನಿಪ್ಪಾಡಿ, ಖಲೀಲ್ ಎನ್.ಕೆ, ಅಬ್ದುಲ್ಲ ಕೆ., ರಫೀಕ್, ಶ್ರೀನಿವಾಸ ಭಂಡಾರಿ, ನಾರಾಯಣ ಶೆಟ್ಟಿ, ಪಂ. ಅಧ್ಯಕ್ಷೆ ಜಯಂತಿ ಕೆ., ಹುಸೈನ್, ಸುಂದರ ಬೀಡುಬೈಲು ಭೇಟಿ ನೀಡಿ ಸಂತಾಪ ಸೂಚಿಸಿದರು. ನಿಧನಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ, ಬೀಡುಬೈಲು ಬ್ರಾಂಚ್ ಸಮಿತಿ, ಕರ್ಷಕ ಸಂಘ, ಸಿಐಟಿಯು, ಡಿವೈಎಫ್‌ಐ ಸಂತಾಪ ಸೂಚಿಸಿದೆ.