ಸಿಪಿಎಂ ಮಂಜೇಶ್ವರ ಏರಿಯಾ ಸಮ್ಮೇಳನ, ಉತ್ಪನ್ನ ಸಂಗ್ರಹ ಜಾಥಾ ನಾಳೆ
ಮಂಜೇಶ್ವರ: ಸಿಪಿಎಂ ಮಂಜೇ ಶ್ವರ ಏರಿಯಾ ಸಮ್ಮೇಳನ ದ. 1, 2ರಂದು ಬೇಕೂರಿನಲ್ಲಿ ನಡೆಯ ಲಿದ್ದು, ಇದರ ಪೂರ್ವಭಾವಿಯಾಗಿ ಉತ್ಪನ್ನ ಸಂಗ್ರಹ ಜಾಥಾ ನಾಳೆ ವಿವಿಧ ಕಡೆಗಳಲ್ಲಿ ನಡೆಯಲಿದೆ. ಉತ್ಪನ್ನ ಸಂಗ್ರಹ ಜಾಥಾದ ಉದ್ಘಾಟನೆಯನ್ನು ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ ನಿರ್ವಹಿಸುವರು. ಅಬ್ದುಲ್ ರಜಾಕ್ ಚಿಪ್ಪಾರು ಅಧ್ಯಕ್ಷತೆ ವಹಿಸುವರು. ಅಶೋಕ್ ಭಂಡಾರಿ ಜಾಥಾ ನಾಯಕನಾಗಿದ್ದು, ನವೀನ್ ಕುಮಾರ್ ಮೆನೇಜರ್ ಆಗಿದ್ದಾರೆ. ಜಾಥಾ ನಾಳೆ ಬೆಳಿಗ್ಗೆ 10ಕ್ಕೆ ದೈಗೋಳಿಯಲ್ಲಿ ಉದ್ಘಾಟನೆ ಗೊಂಡು. 10.30ಕ್ಕೆ ಮಜೀರ್ಪಳ್ಳ ಬಳಿಕ ಕುಂಜತ್ತೂರು, ಹೊಸಂಗಡಿ, ಚಿಗುರುಪಾದೆ ಮೂಲಕ ಸಾಗಿ ಸಂಜೆ 5 ಗಂಟೆಗೆ ಬೇಕೂರಿನಲ್ಲಿ ಸಮಾಪ್ತ್ತಿಯಾಗಲಿದೆ.