ಸಿಪಿಎಂ ಮುಖಂಡರ ನಿಧನ: ಪೈವಳಿಕೆಯಲ್ಲಿ ಸರ್ವಪಕ್ಷ ಸಂತಾಪ ಸಭೆ
ಪೈವಳಿಕೆ: ಸಿಪಿಎಂ ಮುಖಂಡ ಎ.ಕೆ. ನಾರಾಯಣನ್, ಕೆ. ಕುಂಞರಾಮನ್ ಅವರ ನಿಧನಕ್ಕೆ ಪೈವಳಿಕೆಯಲ್ಲಿ ಸರ್ವಪಕ್ಷ ಸಂತಾಪ ಸೂಚಕ ಸಭೆ ಜರಗಿತು. ಸಿಪಿಎಂನ ಹಿರಿಯ ನೇತಾರ ಪೈವಳಿಕೆ ಪಂಚಾಯತ್ ಸದಸ್ಯರು ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಮಂಜೇಶ್ವರ ಏರಿಯ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರ್, ರಾಜ್ಯ ಲೈಬ್ರೆರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್, ಕೆಎಸ್ಟಿಎ ಜಿಲ್ಲಾ ಅಧ್ಯಕ್ಷ ಶ್ಯಾಂಭಟ್, ಸಿಪಿಐಯ ಅಜಿತ್ ಎಂ.ಸಿ, ಲೋರೆನ್ಸ್ ಡಿ’ಸೋಜಾ, ಮುಸ್ಲಿಂ ಲೀಗ್ನ ಆದಂ ಬಳ್ಳೂರು, ಡಿವೈಎಫ್ಐ ಹಾರಿಸ್ ಪೈವಳಿಕೆ, ವಿನಯ ಕುಮಾರ್ ಬಾಯಾರು ಮಾತನಾಡಿದರು. ಪಂಚಾಯತ್ ಅಧ್ಯಕ್ಷೆ ಜಯಂತಿ ಕೆ, ಉದ್ಯೋಗ ಖಾತರಿ ಕಾರ್ಮಿಕರ ಯೂನಿಯನ್ ಶಾಂಭವಿ ಬಾಯಿಕಟ್ಟೆ ಉಪಸ್ಥಿತರಿದ್ದರು. ಸಿಪಿಎಂ ಪೈವಳಿಕೆ ಲೋಕಲ್ ಕಾರ್ಯದರ್ಶಿ ಅಬ್ದುಲ್ಲ ಕೆ. ಸ್ವಾಗತಿಸಿದರು.