ಸಿಪಿಐ ನೇತಾರ ತೋಡಿನಲ್ಲಿ ಪ್ರವಾಹಕ್ಕೆ ಸಿಲುಕಿ ನಾಪತ್ತೆ
ಬದಿಯಡ್ಕ: ತೋಡಿನಲ್ಲಿ ತೇಲಿ ಬಂದ ತೆಂಗಿನ ಕಾಯಿ ಹಿಡಿಯಲೆ ತ್ನಿಸಿದಾಗ ಮಧ್ಯವಯಸ್ಕ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ.
ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬಾಂಜತ್ತಡ್ಕ ನಿವಾಸಿ ಸೀತಾರಾಮ (52) ಎಂಬವರು ನಾಪತ್ತೆಯಾದ ವ್ಯಕ್ತಿ. ಇವರು ಸಿಪಿಐ ಲೋಕಲ್ ಕಮಿಟಿ ಸದಸ್ಯನಾಗಿದ್ದಾರೆ.
ನಿನ್ನೆ ಸಂಜೆ ಬದಿಯಡ್ಕದಿಂದ ಒಂದೂವರೆ ಕಿಲೋ ಮೀಟರ್ ದೂರ ದಲ್ಲಿರುವ ತೋಡಿನಲ್ಲಿ ಸೀತಾರಾಮ ನಾಪತ್ತೆಯಾಗಿ ರುವುದಾಗಿ ಹೇಳಲಾ ಗುತ್ತಿದೆ. ಹುಲ್ಲು ಹೆರೆಯಲೆಂದು ತಿಳಿಸಿ ಸೀತಾರಾಮ ಮನೆಯಿಂದ ತೆರಳಿದ್ದರು. ದೀರ್ಘ ಹೊತ್ತಾದರೂ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ತೋಡಿನಲ್ಲಿ ಪ್ರವಾಹಕ್ಕೆ ಸಿಲುಕಿರುವುದಾಗಿ ತಿಳಿದುಬಂದಿದೆ. ಸೀತಾರಾಮರ ಕೈಯಲ್ಲಿದ್ದ ಕತ್ತಿ, ರೈನ್ ಕೋಟ್, ಚೀಲ ಎಂಬಿವು ತೋಡಿನ ಬಳಿ ಕಂಡುಬಂದಿದೆ. ಅದರ ಸಮೀ ಪದಲ್ಲೇ ತೆಂಗಿನ ಕಾಯಿ ಹಿಡಿಯಲು ಬಳಸುವ ಬಲೆಯೂ ಪತ್ತೆಯಾಗಿದೆ. ಆದ್ದರಿಂದ ತೆಂಗಿನಕಾಯಿ ಹಿಡಿಯ ಲೆತ್ನಿಸಿದಾಗ
ಪ್ರವಾಹಕ್ಕೆ ಸಿಲುಕಿರಬಹುದೆಂದು ಸಂಶಯಿಸ ಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಸೀತಾರಾಮ ನಾಪತ್ತೆ ಯಾದ ತೋಡು ಏಳ್ಕಾನ ಹೊಳೆಗೆ ಸೇರುತ್ತಿದೆ. ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ಸಂಬಂಧಿಕರು, ನಾಗರಿಕರು ಹಾಗೂ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.