ಸಿಬಿಎಸ್ಇ 10, 12ನೇ ತರಗತಿ ಪರೀಕ್ಷೆ ಕಾಸರಗೋಡು ಚಿನ್ಮಯ ವಿದ್ಯಾಲಯಕ್ಕೆ 100 ಶೇ.
ಕಾಸರಗೋಡು: 2023 – 24 ನೇ ಸಾಲಿನ ಸಿ ಬಿ ಎಸ್ ಇ ಹತ್ತನೇ ತರಗತಿ, 12ನೇ ತರಗತಿ ಪರೀಕ್ಷೆಯಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯವು ಶೇ. 100 ಫಲಿತಾಂಶ ದಾಖಲಿಸಿದೆ ಎಂದು ಪ್ರಾಂಶುಪಾಲ ಸುನಿಲ್ ಕುಮಾರ್ ಕೆ .ಸಿ ತಿಳಿಸಿದ್ದಾರೆ. ಹತ್ತನೇ ತರಗತಿ ಪರೀಕ್ಷೆಗೆ ಹಾಜರಾದ 99 ವಿದ್ಯಾರ್ಥಿಗಳಲ್ಲಿ 65 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲೂ 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ ಉತ್ತೀರ್ಣರಾಗಿರುವರು. 500ರಲ್ಲಿ 486 (97.2%) ಅಂಕಗಳೊAದಿಗೆ ಪಾರ್ವತಿ ಅಜಯ್ ಮೊದಲ ಸ್ಥಾನಕ್ಕೂ ಶಬೀರ್ ಶೆರೀಫ್, ಸಿ. ಅಶ್ವಥ್ (478/500) ದ್ವಿತೀಯ ಸ್ಥಾನಕ್ಕೂ ಆದಿ, ಕೆ. ಐ ಮಾಹಿರ್ , ದಿಕ್ಷಿಲ್ ಡಿ, ಗೌರವ್ ಕೆ. (474/500) ತೃತೀಯ ಸ್ಥಾನಕ್ಕೂ ಅರ್ಹರಾಗಿರುವರು.
12ನೇ ತರಗತಿ ಪರೀಕ್ಷೆಯಲ್ಲೂ ಕಾಸರಗೋಡು ಚಿನ್ಮಯ ವಿದ್ಯಾಲಯಕ್ಕೆ 100 ಶೇಕಡಾ ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ 40 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್, 15 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ. 500ರಲ್ಲಿ 496 ಅಂಕ ಪಡೆದ ಕ್ಷಮ ಭಟ್ ಪ್ರಥಮ, ಆಶಿತ್ ರಾವ್ ಕೆ. (484) ದ್ವಿತೀಯ ಸ್ಥಾನ, ಸಿದ್ಧಾರ್ಥ್ ಸುಬ್ರಹ್ಮಣ್ಯನ್ (476) ತೃತೀಯ ಸ್ಥಾನ, ಅದ್ವೈತ್ ಆರವ್ (475) ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಉನ್ನತ ಸಾಧನೆಗೈದಿರುವ ಎಲ್ಲಾ ವಿದ್ಯಾರ್ಥಿಗಳನ್ನೂ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.