ಸಿ.ಎಚ್ ಸೆಂಟರ್ ಉಚಿತ ಡಯಾಲಿಸಿಸ್ ಘಟಕ ಉದ್ಘಾಟನೆ
ಕಾಸರಗೋಡು: ಮುಸ್ಲಿಂಲೀಗ್ ಜಿಲ್ಲಾ ಸಮಿತಿ ಅಧೀನದಲ್ಲಿ ಕಾರ್ಯಾ ಚರಿಸುವ ಕಾಸರಗೋಡು ಸಿ.ಎಚ್. ಸೆಂಟರ್ ಬಡ ರೋಗಿಗಳಿಗಾಗಿ ಏರ್ಪಡಿಸಿದ ಉಚಿತ ಡಯಾಲಿಸಿಸ್ ಘಟಕದ ಉದ್ಘಾಟನೆಯನ್ನು ಬ್ಯಾಂಕ್ ರಸ್ತೆಯಲ್ಲಿರುವ ವಿನ್‌ಟಚ್ ಆಸ್ಪತ್ರೆಯಲ್ಲಿ ಮುಸ್ಲಿಂಲೀಗ್ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸಾದಿಖಲಿ ಶಿಹಾಬ್ ತಂಙಳ್ ನಿರ್ವಹಿಸಿದರು. ಇಲ್ಲಿ ಅರ್ಹರಾದ ಬಡ ರೋಗಗಳಿಗೆ ಉಚಿತವಾಗಿ ಡಯಾಲಿಸಿಸ್ ನಡೆಸಲಾಗುವುದು ಎಂದವರು ತಿಳಿಸಿದರು. ಸಿ.ಎಚ್. ಸೆಂಟರ್ ಅಧ್ಯಕ್ಷ ಅಬ್ದುಲ್ ಲತೀಫ್ ಗೇಟ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ. ಸಲಾಂ ಪ್ರಧಾನ ಭಾಷಣ ಮಾಡಿದರು. ರಾಜ್ಯ ಕೋಶಾಧಿಕಾರಿ ಸಿ.ಟಿ. ಅಹಮ್ಮದಾಲಿ, ಡಾ| ಎಂ.ಕೆ. ಮುನೀರ್, ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹ್‌ಮಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎ.ಕೆ.ಎಂ. ಅಶ್ರಫ್, ವಿ.ಕೆ.ಪಿ. ಹಮೀದಾಲಿ, ಪಿ.ಎಂ. ಮುನೀರ್ ಹಾಜಿ, ಅಬ್ದುಲ್ ಕರೀಮ್ ಸಿಟಿ ಗೋಲ್ಡ್, ಅಬೂಬಕ್ಕರ್ ಹಾಜಿ ಸಹಿತ ಹಲವರು ಭಾಗವಹಿಸಿದರು.