ಸೀತಾಂಗೋಳಿಯಿಂದ ಚಪ್ಪಲಿ ಕಳವು: ಇನ್ನೋರ್ವ ಆರೋಪಿ ಬಂಧನ
ಸೀತಾಂಗೋಳಿ: ಸೀತಾಂಗೋಳಿ ಕಿನ್ಫ್ರಾ ಪಾರ್ಕ್‌ನಲ್ಲಿ ವೆಲ್‌ಫಿಟ್ ಪೋಲಿಮರ್ ಸಂಸ್ಥೆಯಿಂದ 10 ಲಕ್ಷ ರೂಪಾಯಿ ಮೌಲ್ಯದ ಚಪ್ಪಲಿ ಕಳವು ನಡೆದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಚಿಪ್ಪಾರು ಜಾರಂ ಹೌಸ್‌ನ ಅಬ್ದುಲ್ ಶಕೀಲ್ (22) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಇದೇ ಪ್ರಕರಣದಲ್ಲಿ ಈ ಹಿಂದೆ ಮಂಜೇಶ್ವರ ನಿವಾಸಿ ಆಶಿಕ್ ಎಂಬಾತನನ್ನು ಬಂಧಿಸ ಲಾಗಿತ್ತು. ಕಟ್ಟತ್ತಡ್ಕ ಮುಹಿಮ್ಮಾತ್ ನಗರದ ನಿಸಾರ್ ಎಂಬವರ ಮಾಲಕತ್ವದ ಸಂಸ್ಥೆಯಿಂದ ಕಳೆದ ಜೂನ್ 22ರಂದು 10 ಲಕ್ಷ ರೂಪಾಯಿಯ ಚಪ್ಪಲಿ ಕಳವಿಗೀಡಾಗಿತ್ತು. ಈ ಬಗ್ಗೆ ನಿಸಾರ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆರೋಪಿಗಳನ್ನು ಸೆರೆ ಹಿಡಿಯಲು ಪೊಲೀಸರಿಗೆ ಸಾಧ್ಯ ವಾಗಿರಲಿಲ್ಲ. ಈ ಮಧ್ಯೆ ಇತ್ತೀಚೆಗೆ ನಿಸಾರ್ ಹಾಗೂ ಅವರ ಸಂಬಂ ಧಿಕರಾದ ಇಬ್ಬರು ಕುಂಬಳೆ ನಿವಾಸಿಗಳು ಕಾಸರಗೋಡಿನ ನಗರಕ್ಕೆ ತೆರಳಿದ್ದಾಗ ರಸ್ತೆ ಬದಿ ಚಪ್ಪಲಿ ಮಾರಾಟಕ್ಕಿಟ್ಟಿ ರುವುದು ಕಂಡು ಬಂದಿತ್ತು.ಅಲ್ಲಿಗೆ ತೆರಳಿದ ನಿಸಾರ್ ಹಾಗೂ ಸಂಬಂಧಿಕರು ಚಪ್ಪಲಿ ಖರೀದಿಗೆ ಬಂದವರಂತೆ ವರ್ತಿಸಿ ಅಲ್ಲಿದ್ದ ಎಲ್ಲಾ ಚಪ್ಪಲಿಗಳನ್ನು ಪರಿಶೀಲಿಸಿದರು. ಈ ವೇಳೆ ಇವು ತಮ್ಮ ಸಂಸ್ಥೆಯಿಂದ ಕಳವಿಗೀಡಾದ ಚಪ್ಪಲಿಗಳೆಂದು ಖಚಿತಗೊಂಡಿದೆ. ಕೂಡಲೇ ನಗರಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತಲುಪಿ ಚಪ್ಪಲಿ ಮಾರಾಟ ನಡೆಸುತ್ತಿದ್ದವರನ್ನು ಕಸ್ಟಡಿಗೆ ತೆಗೆದು ಬದಿಯಡ್ಕ ಪೊಲೀಸರಿಗೆ ಹಸ್ತಾಂತರಿ ಸಿದ್ದರು. ಕಸ್ಟಡಿಗೊಳಗಾದವರು ನೀಡಿದ ಮಾಹಿತಿಯಂತೆ ಕಳ್ಳರನ್ನು ಗುರುತು ಹಚ್ಚಲು ಪೊಲೀಸರಿಗೆ ಸಾಧ್ಯವಾಗಿದೆ.