ಸೀತಾಂಗೋಳಿಯ ಕಾರ್ಖಾನೆಯಿಂದ ಚಪ್ಪಲಿ ಕಳವು: ಓರ್ವ ಬಂಧನ; ಇನ್ನೋರ್ವ ಕಸ್ಟಡಿಯಲ್ಲಿ
ಸೀತಾಂಗೋಳಿ: ಸೀತಾಂ ಗೋಳಿ ಕಿನ್ಫ್ರಾ ಪಾರ್ಕ್ನಲ್ಲಿರುವ ಚಪ್ಪಲಿ ತಯಾರಿ ಸಂಸ್ಥೆಯಿಂದ 10 ಲಕ್ಷ ರೂಪಾಯಿಗಳ ಚಪ್ಪಲಿ ಕಳವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಓರ್ವ ಕಸ್ಟಡಿಯಲ್ಲಿದ್ದಾನೆ. ಆತನ ತನಿಖೆ ನಡೆಯುತ್ತಿದೆ. ಇದೇ ವೇಳೆ ಕಸ್ಟಡಿಗೆ ತೆಗೆದುಕೊಂಡಿದ್ದು, ಇಬ್ಬರನ್ನು ಪೊಲೀಸರು ಹೇಳಿಕೆ ದಾಖಲಿಸಿ ಬಿಡುಗಡೆಗೊಳಿಸಿದ್ದಾರೆ.
ಮಂಜೇಶ್ವರ ಪೊಸೋಟ್ ನಿವಾಸಿ ಆಶಿಕ್ (27) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಕಟ್ಟತ್ತಡ್ಕ ನಿವಾಸಿ ನಸೀರ್ ಹಾಗೂ ಬೇರೊಬ್ಬರ ಪಾಲುದಾರಿಕೆ ಯಲ್ಲಿ ಸೀತಾಂಗೋಳಿ ಕಿನ್ಫ್ರಾ ಪಾರ್ಕ್ನಲ್ಲಿ ನಡೆಸುವ ಚಪ್ಪಲಿ ತಯಾರಿ ಸಂಸ್ಥೆಯಿಂದ 10 ಲಕ್ಷ ರೂಪಾಯಿಗಳ ವೆಲ್ಫಿಟ್ ಎಂಬ ಚಪ್ಪಲಿ ಕಳವಿಗೀ ಡಾಗಿತ್ತು. ಮೇ 22ರಂದು ಈ ಕಳವು ನಡೆದಿದ್ದು, ಈ ಬಗ್ಗೆ ನಸೀರ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಇದರಿಂದ ಆತಂಕಕ್ಕೀಡಾದ ನಸೀರ್ ಚಪ್ಪಲಿ ಕಳ್ಳರ ಪತ್ತೆಗಾಗಿ ಸ್ವ-ಪ್ರಯತ್ನ ನಡೆಸುತ್ತಿದ್ದರು. ಮೊನ್ನೆ ನಸೀರ್ ಹಾಗೂ ಓರ್ವ ಸಂಬಂಧಿಕ ಕಾಸರಗೋಡು ಪೇಟೆಗೆ ತಲುಪಿದಾಗ ರಸ್ತೆ ಬದಿ ಕಳವಿ ಗೀಡಾದ ಚಪ್ಪಲಿ ಮಾರಾಟಕ್ಕಿರಿಸಿರು ವುದು ಕಂಡುಬಂದಿತ್ತು. ಚಪ್ಪಲಿ ಬೆಲೆ ಬಗ್ಗೆ ಅವರು ವಿಚಾರಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ತಲುಪಿದ ನಗರಠಾಣೆ ಪೊಲೀಸರು ಚಪ್ಪಲಿ ಮಾರಾಟಗೈಯ್ಯುತ್ತಿ ರುವ ವ್ಯಕ್ತಿ ಹಾಗೂ ಆತನ ಸಹಾಯಕರಾಗಿದ್ದ ಇಬ್ಬರನ್ನು ಕಸ್ಟಡಿಗೆ ತೆಗೆದುಕೊಂಡು ಬದಿಯಡ್ಕ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಳಿಕ ಅವರನ್ನು ವಿಚಾರಣೆಗೊಳಪಡಿಸಿದಾಗ 10 ಗೋಣಿ ಚಪ್ಪಲಿ ಹಾಗೂ ಸಂಸ್ಥೆಯಿಂದ ಕಳವು ನಡೆದ ಲ್ಯಾಪ್ಟೋಪ್ ಮಜಿಬೈಲಿನ ಮನೆಯೊಂದರಲ್ಲಿ ದೆಯೆಂದು ತಿಳಿಸಿದರು. ಇದರಂತೆ ಅಲ್ಲಿಗೆ ತೆರಳಿದ ಪೊಲೀಸರು ಅವುಗಳನ್ನು ವಶಪಡಿಸಿದ್ದಾರೆ.
ಈ ಕಳವು ಪ್ರಕರಣದಲ್ಲಿ ಇನ್ನಷ್ಟು ಮಂದಿಯಿರಬಹುದೆಂದು ಅಂ ದಾಜಿಸಲಾಗಿದೆ. ಅವರ ಪತ್ತೆಗಾಗಿ ತನಿಖೆ ಮುಂದುವರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.