ಸುಂದರ ಬಾರಡ್ಕ ಅವರಿಗೆ ದ್ರಾವಿಡ ಭಾಷಾ ಸಾಹಿತ್ಯ ಪುರಸ್ಕಾರ
ಬದಿಯಡ್ಕ : ನವಪುರಂ ಪುಸ್ತಕ ದೇವಾಲಯದ ಆಶ್ರಯದಲ್ಲಿ ಚೆರುಶ್ಶೇರಿ ಕಲಾ ಸಾಹಿತ್ಯ ಸಭಾ ಏರ್ಪಡಿಸಿದ ದ್ರಾವಿಡ ಭಾಷಾ ಸಾಹಿತ್ಯ ಪುರಸ್ಕಾರಕ್ಕೆ ಕನ್ನಡ – ತುಳು ಸಾಹಿತಿ, ಸುಂದರ ಬಾರಡ್ಕ ಆಯ್ಕೆಯಾಗಿದ್ದಾರೆ. ದೇವಾಲಯದ ಸ್ಥಾಪಕ ಹಾಗೂ ಸಾಹಿತಿ ಪ್ರಾಪೊಯಿಲ್ ನಾರಾಯಣನ್ ಪ್ರಕಟನೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಕವನ, ಕತೆ, ಲೇಖನಗಳನ್ನು ಬರೆಯುತ್ತಿರುವ ಸುಂದರ ಬಾರಡ್ಕ ಅವರು ಜಾನಪದ ವೈದ್ಯಕ್ಕೆಸಂಬAಧಿಸಿ ಶೋಧನೆ ನಡೆಸಿದ್ದಾರೆ. ಸ್ಥಳೀಯ ಇತಿಹಾಸ, ಜನಾಂಗಿಕ ಅಧ್ಯಯನದಲ್ಲೂ ತೊಡಗಿಸಿಕೊಂಡಿದ್ದಾರೆ. ಕಪ್ಪು ಹಾದಿಯ ಕೆಂಪು ಹೆಜ್ಜೆಗಳು, ಮಿತ್ತಮ್ಮನ ಕೆಡೆಂಜೋಳು, ಪೊಲದ್ಯೆ, ನೆಲದನಿ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಜಿಲ್ಲಾಮಟ್ಟದ ಕವಿಗೋಷ್ಠಿ, ವಿಚಾರಗೋಷ್ಠಿಗಳಲ್ಲೂ ಭಾಗವಹಿಸಿದ್ದಾರೆ. ಕೇರಳ ತುಳು ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ ಸಹಿತ ಹಲವು ಸಂಸ್ಥೆಗಳಿAದ ಗೌರವಾಭಿನಂದನೆ ಸ್ವೀಕರಿಸಿದ್ದಾರೆ.
ಇದೇ ತಿಂಗಳು 4 ರಂದು ಕಣ್ಣೂರು ಜಿಲ್ಲೆಯ ಚೆರುಪುಳ ಸಮೀಪದ ನವಪುರ ಪುಸ್ತಕ ದೇವಾಲಯದಲ್ಲಿ ನಡೆಯುವ ಬಹುಭಾಷಾ ಕವಿಸಮ್ಮೇಳನದ ವೇದಿಕೆಯಲ್ಲಿ ಸುಂದರ ಬಾರಡ್ಕ ಮತ್ತು ಮಲಯಾಳದ ಕವಿ ಕೃಷ್ಣನ್ ನಡುವಿಲತ್ ಅವರಿಗೆ ದ್ರಾವಿಡ ಭಾಷಾ ಸಾಹಿತ್ಯ ಪುರಸ್ಕಾರ ಪ್ರದಾನ ಜರಗಲಿದೆ.