ಸುಜ್ಞಾನದ ಜ್ಯೋತಿ ಬೆಳಗುವ ಪರ್ವ ನವರಾತ್ರಿ- ಕಾಳಹಸ್ತೇಂದ್ರ ಶ್ರೀ
ಮಧೂರು: ನವರಾತ್ರಿಯು ದುಷ್ಟ ಶಕ್ತಿಗಳನ್ನು ದೂರ ಮಾಡಿ ಸುಜ್ಞಾನದ ಜ್ಯೋತಿಯನ್ನು ಬೆಳಗಿಸುವ ಪರ್ವ. ದೈವತ್ವ -ಮನುಷ್ಯತ್ವ – ರಾಕ್ಷಸತ್ವ ಈ ಮೂರು ಗುಣಗಳು ನಮ್ಮೊಳಗೆ ಇವೆ. ಯಾವುದನ್ನು ಸ್ವೀಕಾರ ಮಾಡಬೇಕು ಎಂಬದನ್ನು ನಾವೇ ನಿರ್ಧರಿಸಬೇಕು. ಎಲ್ಲರೂ ಧರ್ಮ ಮಾರ್ಗದಲ್ಲಿ ಮುನ್ನಡೆಯವಂತೆ ಮಾತೆ ಅನುಗ್ರಹಿಸಲಿ ಎಂದು ಉಡುಪಿ ಕಟಪಾಡಿ ಪಡು ಕುತ್ಯಾರಿನ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಅವರು ಮಧೂರು ಶ್ರೀ ಕಾಳಿಕಾಂಬ ಮಠಕ್ಕೆ ನವರಾತ್ರಿಯ ವೇಳೆ ಚಿತ್ತೈಸಿ ಗುರುಪಾದುಕಾ ಪೂಜೆ – ಪೀಠ ಸಮರ್ಪಣ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.
ಮಧೂರು ಶ್ರೀ ಕಾಳಿಕಾಂಬಾ ಮಠದ ಅಧ್ಯಕ್ಷ ನ್ಯಾಯವಾದಿ ಕೆ ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಆನೆಗುಂದಿ ಮಠದ ಯೋಜನೆ ಹಾಗೂ ಸಮಾಜದ ಯುವ ತಲೆಮಾರುಗಳ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತನಾಡಿದರು.
ಮಠದ ಪದಾಧಿಕಾರಿಗಳಾದ ತಾರಾನಾಥ ಆಚಾರ್ಯ ಮಧೂರು, ಯೋಗೇಂದ್ರ ಆಚಾರ್ಯ , ಪುರುಷೋತ್ತಮ ಆಚಾರ್ಯ ನೆಕ್ರಾಜೆ, ವರಪ್ರಸಾದ್ ಆಚಾರ್ಯ ಕಂಬಾರು, ರಾಜೇಶ್ ಆಚಾರ್ಯ ಮನ್ನಿಪಾಡಿ, ದೇವದಾಸ್ ಆಚಾರ್ಯ ದೇಶಮಂಗಲ, ವೆಂಕಟ್ರಮಣ ಆಚಾರ್ಯ ಮೀಪುಗುರಿ, ಯುವಕ ಸಂಘದ ಅಧ್ಯಕ್ಷ ಮಹೇಶ್ ಆಚಾರ್ಯ ಮಧೂರು, ಪದಾಧಿಕಾರಿಗಳಾದ ಯತಿರಾಜ್ ನೆಕ್ರಾಜೆ, ಮೌನೇಶ್ ಜೆ ಪಿ ನಗರ, ಜ್ಞಾನೇಶ್ ನೀರ್ಚಾಲು, ಭಜನಾ ಸಂಘದ ಪದ್ಮನಾಭ ಆಚಾರ್ಯ ಅಡ್ಕ, ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಲತಾ ಪಿ. ಆಚಾರ್ಯ ನೆಕ್ರಾಜೆ, ಎನ್. ಪರಮೇಶ್ವರ ಆಚಾರ್ಯ ನೀರ್ಚಾಲು, ನಿವೃತ್ತ ಸುಬೇದಾರ್ ವೈ ಧರ್ಮೇಂದ್ರ ಆಚಾರ್ಯ ಮಧೂರು, ಎಂ ಪುರುಷೋತ್ತಮ ಆಚಾರ್ಯ ಕಂಬಾರು, ಕೆ ಬಟ್ಯಪ್ಪ ಆಚಾರ್ಯ ಕಂಬಾರು, ಪೆರ್ಣೆ ವಿಷ್ಣು ಆಚಾರ್ಯ, ದಾಮೋದರ ಆಚಾರ್ಯ ಪ್ರತಾಪ ನಗರ, ಸುಬ್ರಹ್ಮಣ್ಯ ಆಚಾರ್ಯ ನೆಕ್ರಾಜೆ, ಪೆರ್ಣೆ ಮಧುಸೂದನ ಆಚಾರ್ಯ ಕಾಸರಗೋಡು, ರಾಘವ ಆಚಾರ್ಯ ಕರಂದಕ್ಕಾಡು, ಶೇಖರ ಆಚಾರ್ಯ ಕಾಸರಗೋಡು, ತುಕಾರಾಮ ಆಚಾರ್ಯ ಕೆರೆಮನೆ, ಎಸ್.ಕೆ ಅಚ್ಯುತ ಆಚಾರ್ಯ, ಯುವಕ ಸಂಘ, ವಿಶ್ವರೂಪಂ ತಂಡ, ಭಜನಾ ಸಂಘ, ಮಹಿಳಾ ಸಂಘ ಸದಸ್ಯರು ಉಪಸ್ಥಿತರಿದ್ದರು. ಮಧೂರು ಮಠದ ಉಪಾಧ್ಯಕ್ಷ ಕೆ. ಜಗದೀಶ್ ಆಚಾರ್ಯ ಕಂಬಾರು ಸ್ವಾಗತಿಸಿ, ವಂದಿಸಿದರು. ಸ್ವಾಮೀಜಿಯವರನ್ನು ಶ್ರೀಮಠಕ್ಕೆ ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಾಯಿತು. ಗುರುಪಾದುಕಾ ಪೂಜೆಯನ್ನು ಕೇಶವ ಶರ್ಮ ಇರುವೈಲು, ಮೌನೇಶ್ ಶರ್ಮ, ಮಂಜು ಶರ್ಮ ಪಡುಕುತ್ಯಾರು, ಪುರೋಹಿತ್ ವಾಸುದೇವ ಆಚಾರ್ಯ ನೀರ್ಚಾಲು, ಪುರೋಹಿತ್ ಮೌನೇಶ್ ಆಚಾರ್ಯ ಪುತ್ತಿಗೆ ನೆರವೇರಿಸಿದರು.