ಸುವರ್ಣ ಸಂಭ್ರಮದಲ್ಲಿ ಜಯರಾಮ ಪಾಟಾಳಿ ಪಡುಮಲೆ ದಂಪತಿಗೆ ಗೌರವಾರ್ಪಣೆ
ಬದಿಯಡ್ಕ: ಯಕ್ಷರಂಗದ ಸವ್ಯಸಾಚಿ ವೇಷಧಾರಿ, ವೃತ್ತಿಪರ ಮೇಳ, ಹವ್ಯಾಸಿರಂಗದಲ್ಲಿ ತೊಡಗಿಸಿಕೊಂಡಿ ರುವ ಜಯರಾಮ ಪಾಟಾಳಿ ಪಡುಮಲೆ ಯವರ ಸುವರ್ಣ ಸಂಭ್ರಮ ಅಭಿನಂದನಾ ಸಮಿತಿ ನೇತೃತ್ವದಲ್ಲಿ ಗುರುಸದನದಲ್ಲಿ ಜರಗಿದ ಕಾರ್ಯಕ್ರಮ ದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಜಯರಾಮ ಪಾಟಾಳಿ ಪಡುಮಲೆ ದಂಪತಿಯನ್ನು ಗೌರವಿಸಿದರು. ಅಭಿನಂದನಾ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಪೆರ್ಣೆ ಕ್ಷೇತ್ರದ ಯಜಮಾನ ಶ್ರೀಕೃಷ್ಣಯ್ಯ ಅನಂತಪುರ ಸ್ಮರಣಿಕೆ ನೀಡಿದರು. ಕೊಲ್ಲಂಗಾನ ತಂತ್ರಿ ಗಣಾಧಿರಾಜ ಉಪಾಧ್ಯಾಯ, ದೈವನರ್ತಕ ಡಾ. ರವೀಶ ಪರವ ಪಡುಮಲೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಪ್ರವೀಣ್ ಕುಮಾರ್, ಉದ್ಯಮಿ ಶಿವಶಂಕರ ನೆಕ್ರಾಜೆ. ಕ.ಸಾ.ಪ. ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ, ಡಾ| ಶ್ರೀನಿಧಿ ಸರಳಾಯ, ರಾಜೇಶ್ ಆಳ್ವ, ಸೀತಾರಾಮ ಬಳ್ಳುಳ್ಳಾಯ, ಡಾ. ಹರಿಕಿರಣ್ ಬಂಗೇರ, ಮುಖೇಶ್, ರತನ್ ಪಾಂಡಿ, ಗಂಗಾಧರ ಬಲ್ಲಾಳ್, ಶ್ಯಾಮ್ ಪ್ರಸಾದ್ ಮಾನ್ಯ, ಬಿ.ಪಿ. ಶೇಣಿ, ಸುರೇಶ್ ಉಪಸ್ಥಿತರಿದ್ದರು.
ಅಭಿನಂದನಾ ಸಮಿತಿ ಪ್ರಧಾನ ಸಂಚಾಲಕ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು. ಮುಕುಂದರಾಜ್ ಮಲ್ಲ, ಅಶ್ವಿತ್ ಸರಳಾಯ, ಸುಂದರ ನೇತೃತ್ವ ವಹಿಸಿದರು. ನಿವೃತ್ತ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಅಭಿನಂದನಾ ಭಾಷಣ ಮಾಡಿದರು. ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿಗಳಿಂದ ಗೌರವಾರ್ಪಣೆ ನಡೆಯಿತು.