ಸೇತುವೆ ನೀರಲ್ಲಿ ಮುಳುಗಿ ಮುಗು ಪರಿಸರದಲ್ಲಿ ಸಂಚಾರ ಮೊಟಕು: ತುಂಬಿ ಹರಿಯುತ್ತಿರುವ ಜಿಲ್ಲೆಯ ನದಿಗಳು

ಕಾಸರಗೋಡು:  ಜಿಲ್ಲೆಯಲ್ಲಿ ಮಳೆಯಿಂದಾಗಿ ಹೊಳೆಗಳಲ್ಲಿ ನೀರಿನ ಮಟ್ಟ ಗರಿಷ್ಠ ಪ್ರಮಾಣಕ್ಕೆ ತಲುಪಿದೆ. ಇದುವರೆಗೆ 154 ಮನೆಗಳು ಜಿಲ್ಲೆಯಲ್ಲಿ ಪೂರ್ಣವಾಗಿಯೂ, 10 ಮನೆಗಳು ಆಂಶಿಕವಾಗಿಯೂ ಹಾನಿ ಗೊಂಡಿವೆ. ಎರಡು ಆವರಣಗೋ ಡೆಯೂ ನಾಶವಾಗಿದೆ. ಉಪ್ಪಳ, ಶಿರಿಯ ಹೊಳೆಗಳಲ್ಲಿ ನೀರಿನ ಮಟ್ಟ ಅಪಾಯಕರ ಸ್ಥಿತಿಗೆ ತಲುಪಿದೆ. ಚಂದ್ರ ಗಿರಿ, ಮೊಗ್ರಾಲ್, ಕಾರ್ಯಾಂ ಗೋಡ್, ನೀಲೇಶ್ವರ ಹೊಳೆಗಳಲ್ಲೂ ನೀರು ಮುನ್ನೆಚ್ಚರಿಕೆ ಮಟ್ಟವನ್ನೂ ದಾಟಿದೆ.

ಕುಡಾಲುಮೇರ್ಕಳ, ಅಂಗಡಿ ಮೊಗರುನಲ್ಲಿ ಮೈಮೂನರ ಮನೆ ಪೂರ್ಣವಾಗಿ ನಾಶಗೊಂಡಿದೆ. ಇದರಿಂದಾಗಿ ಕುಟುಂಬ ಸಮೀಪದ  ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿದೆ. ಬಂಬ್ರಾಣಬಯಲು ಆಮಿನರ ಮನೆ ಕಡಾ ತೆಂಗು ಬಿದ್ದು ಹಾನಿಯಾಗಿದೆ.

ಮುಗು ಸುಬ್ರಹ್ಮಣ್ಯ ಕ್ಷೇತ್ರ ಸಮೀಪದ ಸೇತುವೆಯಲ್ಲಿ ನೀರು ತುಂಬಿದ ಕಾರಣ ಈ ಭಾಗದಲ್ಲಿ ಸಂಚಾರ ಮೊಟಕುಗೊಂಡಿತು. ಮುಂಡ್ಯತ್ತಡ್ಕ- ಉಕ್ಕಿನಡ್ಕ ರಸ್ತೆಯ ಸೇತುವೆ ನೀರಿನಲ್ಲಿ ಮುಳುಗಿದೆ. ಉಕ್ಕಿನಡ್ಕ ಮೆಡಿಕಲ್ ಕಾಲೇಜು, ಕುಂಬಳೆ, ಪೈವಳಿಕೆ, ಮೀಂಜ, ವರ್ಕಾಡಿ, ಮಂಜೇಶ್ವರ ಭಾಗಗಳಿಗೆ ಹಾಗೂ ಪುತ್ತಿಗೆ ಪಂಚಾಯತ್‌ನ ಕೃಷಿ ಭವನ, ಪುತ್ತಿಗೆ ಶಾಲೆ, ವಿಲ್ಲೇಜ್ ಕಚೇರಿ, ಕುಟುಂಬಾರೋಗ್ಯ ಕೇಂದ್ರ ಎಂಬೆಡೆಗಳಿಗೆ ಈ ರಸ್ತೆಯ ಮೂಲಕ ಸಾಗಬೇಕಾಗಿದೆ. ಸೇತುವೆಗೆ 8.7 ಮೀಟರ್ ಎತ್ತರ, 4.7 ಮೀಟರ್ ಅಗಲವಿದೆ. ಪುತ್ತಿಗೆ ಹೊಳೆ ಮಳೆಗಾ ಲದಲ್ಲಿ ತುಂಬಿ ಹರಿಯುವಾಗ ರಸ್ತೆ ಹಾಗೂ ಸೇತುವೆ ನೀರಿನಡಿಯಲ್ಲಾಗು ತ್ತಿದೆ. ಈ ಸಮಸ್ಯೆಗೆ ಪರಿಹಾರ ಕಾಣ ಬೇಕೆಂದು ಆಗ್ರಹಿಸಿ ಮುಖ್ಯಮಂ ತ್ರಿಯ ಅದಾಲತ್‌ನಲ್ಲೂ, ನವಕೇರಳ ಸಭೆಯಲ್ಲೂ ದೂರು ನೀಡಲಾಗಿತ್ತು. ಬಳಿಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಸಂದರ್ಶಿಸಿ ಎಸ್ಟಿಮೇಟ್ ಸಿದ್ಧಪಡಿಸಿದ್ದರು. ಈಗಿರುವ ಸೇತುವೆಗೆ ಬದಲಾಗಿ 10 ಮೀಟರ್ ಉದ್ದ ಹಾಗೂ ಈಗಿರುವು ದಕ್ಕಿಂತ ಹೆಚ್ಚು ಅಗಲದಲ್ಲಿ, ಎತ್ತರದಲ್ಲಿ ನೂತನ ಸೇತುವೆ ನಿರ್ಮಿಸಿದರೆ ಮಾತ್ರವೇ ಪರಿಹಾರ ಸಾಧ್ಯವೆಂದು ಕಂಡುಕೊಳ್ಳಲಾಗಿತ್ತು. ಇದಕ್ಕೆ ಒಟ್ಟು ವೆಚ್ಚವಾಗಿ ೪ ಕೋಟಿ ರೂ. ಅಗತ್ಯ ವಿದೆ ಎಂದು ವರದಿ ನೀಡಲಾಗಿತ್ತು. ಮಳೆ ಹೆಚ್ಚಾದ ಸಂದರ್ಭಗಳಲ್ಲಿ ಈ ಸಮಸ್ಯೆ ಇಲ್ಲಿ ಕಂಡು ಬರುತ್ತಿದ್ದು, ಹೊಳೆಯಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಈ ರಸ್ತೆ ಮೂಲಕ ಸಂಚಾರ ಸಾಧ್ಯವಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page