ಸೈಕಲ್ ಕಳವು ಆರೋಪಿ ಸೆರೆ
ಬದಿಯಡ್ಕ: ಚರ್ಲಡ್ಕ ಬಾಡಿಗೆ ಕೊಠಡಿಯಲ್ಲಿ ವಾಸ ಮಾಡುತ್ತಿರುವ ಕರ್ನಾಟಕ ನೆಲ್ಯಾಡಿ ಹೊಸಮಜಲು ನಿವಾಸಿ ಸುಲೈಮಾನ್ (೪೦)ನನ್ನು ಸೈಕಲ್ ಕಳವು ಪ್ರಕರಣದಲ್ಲಿ ಸೆರೆ ಹಿಡಿಯಲಾಗಿದೆ. ಮಾಕಿಪರಂಬ್‌ನ ನಫೀಸರ ಮನೆ ಹಿತ್ತಿಲಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ಕಳವುಗೈಯ್ಯಲು ಯತ್ನಿಸುತ್ತಿದ್ದ ಮಧ್ಯೆ ಸ್ಥಳೀಯರು ಸೆರೆ ಹಿಡಿದು ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ತಲುಪಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.