ಸೋಂಕಾಲಿನಲ್ಲಿ ದಿನಪೂರ್ತಿ ಉರಿಯುತ್ತಿರುವ ಮಿನಿಮಾಸ್ಟ್ ದೀಪ
ಉಪ್ಪಳ: ಕೆಲವು ಕಡೆ ಬೀದಿ ದೀಪವಿದ್ದರೂ ಉರಿಯದೆ ಕತ್ತಲೆಯಿಂದ ಸಮಸ್ಯೆಯÁಗುತ್ತಿರುವ ಮದೆs್ಯ ಸೋಂಕಾಲು ಮಸೀದಿ ಬಳಿಯ ಬಸ್ ನಿಲ್ದಾಣ ಪರಿಸರದಲ್ಲಿ ಸ್ಥಾಪಿಸಲಾದ ಮಿನಿಮಾಸ್ಟ್ ಬೀದಿ ದೀಪ ಹಗಲೂ ಉರಿಯುತ್ತಿದೆ. ಇದರಿಂದ ಪಂಚಾಯತ್‌ಗೆ ವಿದ್ಯುತ್ ಬಿಲ್‌ನ ಹೊರೆ ಅಧಿಕವಾಗುವ ಸಾದ್ಯತೆ ಇದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ದೀಪದ ಕಂಬದಲ್ಲಿ ಅಳವಡಿಸಿದ ಪ್ಯೂಸ್ ಹಾನಿಗೀಡಾಗಿರುವುದೇ ಹಗಲು ಹೊತ್ತಿನಲ್ಲಿ ಉರಿಯಲು ಕಾರಣವೆನ್ನಲಾಗಿದೆ. ಈ ಹಿಂದೆ ಒಂದು ತಿಂಗಳ ತನಕ ನಿರಂತರವಾಗಿ ಹಗಲು ರಾತ್ರಿ ದೀಪ ಉರಿಯುತ್ತಿತ್ತು. ಬಳಿಕ ನಂದಿತ್ತು. ಇದೀಗ ಹಲವು ದಿನಗಳಿಂದ ಹಗಲು ಹೊತ್ತಿನಲ್ಲಿ ಉರಿಯುತ್ತಿದೆ. ರಸ್ತೆ ಬದಿಯಲ್ಲಿರುವ ಕೆಲವೊಂದು ಬೀದಿ ದೀಪಗಳು ಹಗಲು ಉರಿಯುತ್ತಿರುವುದು ವ್ಯಾಪಕಗೊಂಡಿದೆ. ಸಂಬAಧಪಟ್ಟವರು ದೀಪಗಳನ್ನು ದುರಸ್ತಿಗೊಳಿಸಿ ಹಗಲು ಉರಿಯುತ್ತಿರುವುದನ್ನು ನಿಲ್ಲಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.