ಸೋಂಕಾಲಿನಲ್ಲಿ ಸ್ಕೂಟರ್-ಕಾರು ಅಪಘಾತ: ಸವಾರ ಮೃತ್ಯು
ಉಪ್ಪಳ: ಸ್ಕೂಟರ್‌ಗೆ ಕಾರು ಡಿಕ್ಕಿಹೊಡೆದು ಸವಾರ ಮೃತಪಟ್ಟ ಘಟನೆ ಸೋಂ ಕಾಲಿನಲ್ಲಿ ನಡೆದಿದೆ. ಮೀಂಜ ಪಂಚಾಯತ್‌ನ ಕುಳೂರು ಕೊಜಮುಕು ಉಮಿಕ್ಕಳ ನಿವಾಸಿ ದಿ| ಮೊಯಿದೀನ್ ಕುಂಞÂ ಯವರ ಪುತ್ರ ಮೊಹಮ್ಮದ್ ಹನೀಫ್ (41) ಮೃತಪಟ್ಟಿದ್ದಾರೆ. ಬೇಕೂರು ಬಳಿಯ ಒಬರ್ಲೆ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮ ಕಳೆದು ಸ್ಕೂಟರ್‌ನಲ್ಲಿ ಕೊಡಂಗೆಗೆ ತೆರಳಿದ್ದರು. ಅಲ್ಲಿಂದ ಮನೆಗೆ ತೆರಳಲು ಸೋಂಕಾಲು ರಸ್ತೆ ಪ್ರವೇಶಿಸುತ್ತಿದ್ದಂತೆ ಬೇಕೂರು ಭಾಗದಿಂದ ಆಗಮಿಸಿದ ಕಾರು ಸ್ಕೂಟರ್‌ಗೆ ಡಿಕ್ಕಿಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ಮೃತ್ಯಪಟ್ಟಿದ್ದರು. ಇವರು ಗೋವದಲ್ಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂ ದೆಯಷ್ಟೇ ಊರಿಗೆ ತಲುಪಿದ್ದರು. ಮಂ ಜೇಶ್ವರ ಪೊಲೀಸರು ಪ್ರಕರಣ ದಾಖ ಲಿಸಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಿನ್ನೆ ರಾತ್ರಿ ಒಬರ್ಲೆ ಜುಮಾ ಮಸೀದಿಯಲ್ಲಿ ಅಂತ್ಯಸAಸ್ಕಾರ ನಡೆಸಲಾಯಿತು. ಮೃತರು ತಾಯಿ ನಫೀಸ. ಪತ್ನಿ ಮಿಶ್ರಿಯಾ, ಮಕ್ಕಳಾದ ಅಜ್ಮಾಲ್, ಫಾತಿಮ್ಮ, ಮೊಹಮ್ಮದ್ ಅಪ್ಸಲ್. ಸಹೋದರರಾದ ಸಲೀಂ, ಯೂಸಫ್, ಫಾರೂಕ್, ಸಹೋದರಿಯರಾದ ಫಾತಿಮ್ಮ, ತಾಹಿರ, ನಸೀಮ, ಹಸೀನ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.