ಸೋಮನಾಥ ಯುವಕ ಮಂಡಲಕ್ಕೆ ನೂತನ ಪದಾಧಿಕಾರಿಗಳು
ಕುಂಬಳೆ: ಸೋಮನಾಥ ಯುವಕ ಮಂಡಲ ಶಾಂತಿನಗರ ಕುಂಟಂಗೇರಡ್ಕ ಇದರ 33ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಂಘದ ಅಧ್ಯಕ್ಷ ರವಿಚಂದ್ರ ರಾಹಿತ್ಲು ಇವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯದರ್ಶಿ ಲಕ್ಷ್ಮಣ ಮಾವಿನಕಟ್ಟೆ ಸ್ವಾಗತಿಸಿ ವರದಿ ಮಂಡಿಸಿದರು. ಸಂಘದ ಹಿರಿಯ ಸದಸ್ಯ ನಾರಾಯಯಣ ಬಿ.ಕೆ. ಐತ್ತಾರ್, ಟಿ.ಆರ್. ಶ್ರೀನಿವಾಸ ಪಳ್ಳತ್ತೂರು, ವಿಜಯಕುಮಾರ್ ಎಂ.ಕೆ. ಶುಭ ಕೋರಿದರು. ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಸಂತ ಪಳ್ಳತ್ತರು, ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಎಂ.ಕೆ, ಕೋಶಾಧಿಕಾರಿಯಾಗಿ ಅನಿಲ್ ಕುಮಾರ್ ಎಸ್., ಉಪಾಧ್ಯಕ್ಷರಾಗಿ ಶ್ರೀನಿವಾಸ ಪಳ್ಳತ್ತರು, ಜೊತೆ ಕಾರ್ಯದರ್ಶಿಯಾಗಿ ಆನಂದ ಮಾವಿನಕಟ್ಟೆ ಕಲಾಕಾರ್ಯದರ್ಶಿಯಾಗಿ ಈಶ್ವರ ಶಾಂತಿನಗರ, ಕ್ರೀಡಾ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಪಳ್ಳತ್ತರು, ಲೆಕ್ಕ ಪರಿಶೋಧಕರಾಗಿ ಪ್ರಶಾಂತ್ ಪಳ್ಳತ್ತರು, ರಾಜೇಶ್ ನೆಕ್ರಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜನಾರ್ದನ ಪಿ. ಲಕ್ಷ್ಮಣ ಮಾವಿನಕಟ್ಟೆ, ಕೃಷ್ಣ ಮಾವಿನಕಟ್ಟೆ, ರವಿಚಂದ್ರ ರಾಹಿತ್ಲು, ಸಂಜೀವ ಪೂಜಾರಿ, ಮಾದವ ಪೆರುವಾಡ್, ವಿಜಯ ಕುಮಾರ್ ಎಂ.ಕೆ. ಕೃಷ್ಣ ಮೂಜಿಮುಡಿ, ನವೀನ್ ದೇವಿನಗರ ಇವರನ್ನು ಆಯ್ಕೆ ಮಾಡಲಾಯಿತು. ಜನಾರ್ದನ ಪಳ್ಳತ್ತರು ವಂದಿಸಿದರು.