ಸ್ಕೂಟರ್ ಕಳವು: ಇಬ್ಬರ ಸೆರೆ
ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣ ಪರಿಸರದಿಂದ ಸ್ಕೂಟರ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಕಾಸರ ಗೋಡು ಪೊಲೀಸ್ ಠಾಣೆಯ ಎಸ್‌ಐ ರಾಮಚಂದ್ರನ್ ಬಂಧಿಸಿದ್ದಾರೆ.
ಕಣ್ಣೂರು ತೋಟ್ಟಡ ಮುಬಾರಕ್ ಮಂಜಿಲ್‌ನ ಮೊಹಮ್ಮದ್ ತ್ವಾಹಾ (೨೧) ಮತ್ತು ವಳಪಟ್ಟಣಂ ಮುಂಡೋ ಲ್ ವಯಲ್‌ನ ಕೆ.ಎನ್. ನಿಬ್ರಾಸ್ (೨೩) ಬಂಧಿತರಾದ ಆರೋಪಿಗಳು.
೨೦೨೩ ನವಂಬರ್ ೫ರಂದು ಕಾಸರಗೋಡು ರೈಲು ನಿಲ್ದಾಣ ಪರಿಸರ ದಲ್ಲಿ ನಿಲ್ಲಿಸಲಾಗಿದ್ದ ಕಾಸರಗೋಡಿನ ಫಾತಿಮಾ ಎಂಬವರ ಸ್ಕೂಟರ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಈ ಆರೋಪಿಗಳನ್ನು ಬಂಧಿಸಲಾಗಿದೆ.ಕದ್ದ ವಾಹನವನ್ನು ಆರೋಪಿ ಕಣ್ಣೂರಿನ ಗುಜರಿ ಅಂಗಡಿಯೊಂದಕ್ಕೆ ಮಾರಾಟ ಮಾಡಲೆತ್ನಿಸಿದ್ದು ಆಗ ಅವರನ್ನು ಅಲ್ಲಿಂದ ಕಣ್ಣೂರು ಪೊಲೀಸರು ಬಂಧಿಸಿ ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಬಳಿಕ ಕಾಸರಗೋಡು ಪೊಲೀಸರು ಈ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನದಿಂದ ತಮ್ಮ ವಶಕ್ಕೆ ತೆಗೆದು, ಅವರನ್ನು ಕಾಸರಗೋಡು ರೈಲು ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ.